ಪಂ. ಜವಾಹರಲಾಲ್ ನೆಹರು

ಪಂ. ಜವಾಹರಲಾಲ್ ನೆಹರು

ಜವಾಹರಲಾಲ್ ನೆಹರು ಜವಾಹರಲಾಲ್ ನೆಹರು
ಜನನ:   ನವೆಂಬರ್ ೧೪, ೧೮೮೯
ಮರಣ: ಮೇ ೨೭, ೧೯೬೪
ಹುಟ್ಟಿದೂರು: ಅಲಹಾಬಾದ್, ಉತ್ತರ ಪ್ರದೇಶ
ಭಾರತದ ಪ್ರಧಾನ ಮಂತ್ರಿ
ಅಧಿಕಾರ ಅವಧಿ: ಮೊಟ್ಟ ಮೊದಲ ಪ್ರಧಾನ ಮಂತ್ರಿ
ರಾಜಕೀಯ ಪಕ್ಷ: ಭಾರತ ರಾಷ್ಟ್ರೀಯ ಕಾಂಗ್ರೆಸ್
ಅಧಿಕಾರ ವಹಿಸಿಕೊಂಡಿದ್ದು: ಆಗಸ್ಟ್ ೧೫, ೧೯೪೭
ಅಧಿಕಾರ ಬಿಟ್ಟುಕೊಟ್ಟಿದ್ದು: ಮೇ ೨೭, ೧೯೬೪
ಇವರ ಉತ್ತರಾಧಿಕಾರಿ:      ಗುಲ್ಜಾರಿಲಾಲ್ ನಂದ
'ಮಹಾತ್ಮಗಾಂಧಿಯೊಂದಿಗೆ ನೆಹರು
ಜವಾಹರಲಾಲ್ ನೆಹರು (ನವೆಂಬರ್ ೧೪, ೧೮೮೯ - ಮೇ ೨೭, ೧೯೬೪) - ಭಾರತದ ಮೊದಲ ಪ್ರಧಾನ ಮಂತ್ರಿ, ಸ್ವಾತಂತ್ರ್ಯ ಹೋರಾಟಗಾರರು. ಆಗಸ್ಟ್ ೧೫, ೧೯೪೭ ರಿಂದ ಪ್ರಾರಂಭಿಸಿ ಇವರು ಮರಣಕಾಲದವರೆಗೂ ಭಾರತದ ಪ್ರಧಾನಿಯಾಗಿದ್ದರು.
 ನೆಹರುರವರ ಸಾರ್ವಜನಿಕ ಜೀವನ೧೮೮೯-೧೯೧೮ 
    ಪಂ, ಜವಹರಲಾಲ್ ನೆಹರು, ಆಗಿನ ಕಾಲದ ಪ್ರಮುಖ ಕಾಂಗ್ರೆಸ್ ನಾಯಕರಾಗಿದ್ದ ಮೋತಿಲಾಲ್ ನೆಹರು ಅವರ ಮಗ. ನೆಹರೂ ಇಂಗ್ಲೆಂಡ್‌ನ ಹ್ಯಾರ್ರೊ ಸ್ಕೂಲ್ ಹಾಗು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಓದು ಮುಗಿಸಿ, ತಂದೆಯೊಂದಿಗೆ ರಾಜಕೀಯದಲ್ಲಿ ಸಕ್ರಿಯರಾದರು.
    ಇಂಗ್ಲೆಂಡ್‌ನಲ್ಲಿದ್ದಾಗ ನೆಹರು ಅವರು ಫೇಬಿಯನ್ ಸಾಮಾಜಿಕ ವಿಧಾನಗಳನ್ನು ಬಹುವಾಗಿ ಮೆಚ್ಚಿದ್ದರು. ೧೯೧೬ರ ವಸಂತ ಪಂಚಮಿಯ ದಿನದಂದು ನೆಹರು ಅವರು ಕಮಲಾ ಕೌಲ್‌ರವರನ್ನು ಮದುವೆಯಾದರು.[kkk-ಪುಟ ಕೆಡಿಸುತ್ತಾನೆj
 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷ ೧೯೧೮-೧೯೩೭
 ೧೯೧೯ ರಲ್ಲಿ ಮಗಳು ಇಂದಿರಾ ಪ್ರಿಯದರ್ಶಿನಿ ಜನಿಸಿದಳು. ರಾಜಕೀಯದಲ್ಲಿ, ಮಹಾತ್ಮ ಗಾಂಧಿಯವರ ಶಿಷ್ಯನಾದ ಇವರು, ಮೊದಲ ಬಾರಿಗೆ ೧೯೨೯ ರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಮೇಲೇರಿದರು. ಈ ದಿನಗಳನ್ನು ಇವರು ಬಹುವಾಗಿ ಕಾರಾಗೃಹವಾಸ ದಲ್ಲಿ ಪುಸ್ತಕಗಳು, ಪತ್ರಗಳನ್ನು ಬರೆಯುತ್ತಾ ಕಳೆದರು.
ಕ್ವಿಟ್ ಇಂಡಿಯ ಆಂದೋಲನದಲ್ಲಿ ೧೯೩೭-೧೯೪೭
 'ಭಾರತವನ್ನು ಬಿಟ್ಟು ತೊಲಗಿ' (Quit India Movement) ಪರ್ಯಾಯ ೧೯೪೨ರಲ್ಲಿ ೩೨ ತಿಂಗಳಿಗೆ ಕಾರಾಗೃಹವಾಸ ಅನುಭವಿಸಿದ ಇವರು, ಭಾರತದ ಮೊದಲ ಸರಕಾರವನ್ನು ೧೯೪೬ರಲ್ಲಿ ರಚಿಸಿದರು.
ಭಾರತದ ಮೊಟ್ಟ ಮೊದಲ ಪ್ರಧಾನಿಯಾಗಿ ೧೯೪೭-೧೯೬೪
 ನೆಹರೂರವರು ೧೮ ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿದ್ದರು. ಇವರು ೧೯೬೪ರ ಮೇ ೨೭ ರಂದು ನಿಧನರಾದರು. ಪಂಡಿತ ಜವಹರಲಾಲ್ ನೆಹರೂರವರು ಆಗಸ್ಟ್ ೧೪ ರ ಮಧ್ಯರಾತ್ರಿ, ಸಂಸತ್ತನ್ನುದ್ದೇಶಿಸಿ ಮಾಡಿದ 'ಎ ಟ್ರಿಸ್ಟ್ ವಿಥ್ ಡೆಸ್ಟಿನಿ ಭಾಷಣದ ಕನ್ನದ ಅನುವಾದ' : "ಹಿಂದೊಮ್ಮೆ ನಾವು ವಿಧಿಗೊಂದು ಮಾತಿತ್ತಿದ್ದೆವು. ಅ ಭಾಷೆಯನ್ನು ಕೇವಲ ಸಂಪೂರ್ಣವಾಗಿಯಲ್ಲದೇ ಮಹತ್ತರವಾಗಿ ಕಾರ್ಯಗತಗೊಳಿಸುವ ಸಮಯವಿಂದೊದಗಿದೆ. ಈ ನಡು ರಾತ್ರಿಯ ವಿಶೇಷ ಘಳಿಗೆಯಲ್ಲಿ, ಇಡೀ ವಿಶ್ವ ನಿದ್ರಿಸುತ್ತಿರುವಾಗ, ಭಾರತ ಸ್ವಾತಂತ್ರ್ಯವನ್ನು ಮೈದಳೆದು ಮೇಲೇಳಲಿದೆ. ಹಳೆತೆಲ್ಲವನ್ನೊದರಿ ಹೊಸತನಕ್ಕೆ ಕಾಲಿಡುವ ಮತ್ತು ಶತಮಾನಗಳಿಂದ ಶೋಷಿಸಲ್ಪಟ್ಟ ನಾಡಿನಾತ್ಮ ಧ್ವನಿದಳೆವ ಈ ಘಳಿಗೆ, ಇತಿಹಾಸದ ಅಪರೂಪದ ಮುಹೂರ್ತಗಳಲ್ಲೊಂದು. ಈ ಶುದ್ಧ ಸಮಯದಲ್ಲಿ ಭಾರತದ ಮತ್ತು ಭಾರತಾಂಬೆ ಯ ಸತ್ಪ್ರಜೆಗಳ ಸೇವೆಗಾಗಿ, ಹೆಚ್ಚೇನು ವಿಶ್ವದೊಳಿತಿಗಾಗಿ ನಮ್ಮದೆಲ್ಲವನ್ನು ಮುಡಿಪಿಡುವುದಾಗಿ ಮಾಡುವ ಪ್ರತಿಜ್ಞೆ ಅತೀ ಸಮರ್ಪಕವೆನಿಸುತ್ತದೆ."
ನೆಹರೂ ಅವರ ಅಂತಿಮ ಕವನ/ಬಯಕೆ
    ಜವಾಹರಲಾಲ್‌ ನೆಹರೂ ಮೃತರಾದಾಗ ಅವರ ಪಕ್ಕದಲ್ಲಿ ಈ ಕವನದ ಸಾಲುಗಳನ್ನು ಗೀಚಿದ ಕಾಗದದ ತುಣುಕು ದೊರಕಿತ್ತು.
        ಕಾಡೂ ಸುಂದರವಾಗಿದೆ, ದಟ್ಟ ಕತ್ತಲೆಯಿಂದ ಕೂಡಿದೆ.
        ಆದರೆ, ನಾನು ಮಾತುಗಳನ್ನು ಉಳಿಸಿಕೊಳ್ಳ ಬೇಕಿದೆ.
    ನಿದ್ದೆಗೆ ಜಾರುವ ಮುನ್ನ ಮೈಲುಗಟ್ಟಲೇ ಕ್ರಮಿಸಬೇಕಿದೆ, ಮೈಲುಗಟ್ಟಲೇ ಕ್ರಮಿಸಬೇಕಿದೆ.

ಜವಾಹರ್ ಲಾಲ್ ನೆಹರು
ಜವಾಹರರಿಗೆ ಮೊದಲಿನಿಂದಲೂ ಮಕ್ಕಳೆಂದರೆ ಬಹಳ ಪ್ರೀತಿ.ಮಕ್ಕಳೊಡನೆ ಆಟವಾಡುವುದೆಂದರೆ ಆನಂದ. ಸ್ವತಂತ್ರ ಭಾರತದ ಪ್ರಧಾನಮಂತ್ರಿಯಾಗಿ ದಿನವಿಡೀ ದುಡಿತ ವಿದ್ದಾಗಲೂ ಅವರು ಮಕ್ಕಳೊಡನೆ ಆಡುವ ಪ್ರಸಂಗ ತಪ್ಪಿಸುತ್ತಿರಲಿಲ್ಲ. ಯಾವುದೇ ಸಭೆಗೆ ಹೋಗಿರಲಿ, ಎಷ್ಟೇ ಅವಸರದ ಕಾರ್ಯಕ್ರಮವಿರಲಿ ಅವರು ಮಕ್ಕಳನ್ನು ನೋಡಿದ ಕೂಡಲೆ ಎತ್ತಿ ಮುದ್ದಾಡುತ್ತಿದ್ದರು. ‘‘ನಿಜವಾದ ಜವಾಹರರನ್ನು ನೋಡಬೇಕಾದರೆ ಅವರು ಮಕ್ಕಳೊಂದಿಗೆ ಇರುವಾಗ ನೋಡಬೇಕು. ಮಕ್ಕಳಂತೆಯೇ ಮಾತನಾಡಿ, ಅವರ ಹಾಗೆಯೇ ಆಟವಾಡಿ ನಲಿದು ಆನಂದಪಡುತ್ತಾರೆ’’ ಎಂದು ಅವರ ತಂಗಿ ಶ್ರೀಮತಿ ವಿಜಯಲಕ್ಷ್ಮಿ ಪಂಡಿತರು ಹೇಳಿದ್ದಾರೆ. ನವೆಂಬರ್ 14 ನಮ್ಮ ದೇಶದ ಒಬ್ಬ ಮಹಾಪುರುಷರಾದ ಪಂಡಿತ ಜವಾಹರ್‌ಲಾಲ್ ನೆಹರು ಅವರ ಜನ್ಮದಿನ. ಅಂದು ಭಾರತದಲ್ಲೆಲ್ಲ ಮಕ್ಕಳ ದಿನಎಂದು ಸಂಭ್ರಮದಿಂದ ಪ್ರತಿವರುಷ ಆಚರಿಸುತ್ತೇವೆ. ಜವಾಹರರನ್ನು ಮಕ್ಕಳು ಚಾಚಾ ನೆಹರೂಎಂದು ಪ್ರೀತಿ-ಗೌರವಗಳಿಂದ ಕರೆಯುತ್ತಾರೆ. ಚಾಚಾ ಎಂದರೆ ಚಿಕ್ಕಪ್ಪ.

ನೆಹರು ಅವರ ಪೂರ್ವಜರ ಹೆಸರು ನೆಹರುಆಗಿದ್ದಿರಲಿಲ್ಲ. ಅವರ ಪೂರ್ವಜರು ಕಾಶ್ಮೀರದಲ್ಲಿದ್ದರು. ಅವರಿಗೆ ರಾಜಕೌಲ  ಎಂಬ ಹೆಸರಿತ್ತು. ಪಂಡಿತ ರಾಜಕೌಲರು ಸಂಸ್ಕೃತ-ಫಾರಸೀ ಭಾಷೆಗಳಲ್ಲಿ ವಿದ್ವಾಂಸರಾಗಿದ್ದರು. ಕ್ರಿ.ಶ. 1716ರಲ್ಲಿ ದಿಲ್ಲಿಯ ಮೊಗಲದೊರೆ ಫರುಕ್ಸಿಯರನು ಕಾಶ್ಮೀರಕ್ಕೆ ಭೆಟ್ಟಿ ಕೊಟ್ಟಾಗ ಪಂಡಿತ ರಾಜಕೌಲರನ್ನು ದಿಲ್ಲಿಗೆ ಕರೆತಂದು ನಗರದ ನಡುವೆ ಹರಿಯುತ್ತಿದ್ದ ಕಾಲುವೆಯ ಪಕ್ಕದಲ್ಲಿ ಮನೆ ಕಟ್ಟಿಸಿಕೊಟ್ಟನು. ಕಾಲುವೆಗೆ ಹಿಂದಿ ಭಾಷೆಯಲ್ಲಿ ನಹರ್ಎನ್ನುತ್ತಾರೆ. ಹೀಗಾಗಿ ನಹರ್ಪಕ್ಕದ ಮನೆಯವರು ನೆಹರೂಆದರು.

ಬಾಲ್ಯ-ವಿದ್ಯಾಭ್ಯಾಸ

ಮೋತೀಲಾಲರು ಕಲಿತು ದೊಡ್ಡವರಾಗಿ ಅಲಹಾಬಾದಿನಲ್ಲಿ ವಕೀಲಿ ವೃತ್ತಿ ಪ್ರಾರಂಭಿಸಿ ಅಪಾರ ಕೀರ್ತಿ ಮತ್ತು ಹಣ ಗಳಿಸಿದರು. ಜವಾಹರರು ಹುಟ್ಟಿದ್ದು 1889ನೇ ನವಂಬರ 14 ರಂದು. ತಾಯಿ ಸ್ವರೂಪರಾಣಿ. ವೈಭವದ ಜೀವನ ಶ್ರೀಮಂತ ತಂದೆಯ ಒಬ್ಬನೇ ಮಗನಾದ ಜವಾಹರರು ರಾಜಕುಮಾರನಂತೆ ಅತ್ಯಂತ ಸುಖದಿಂದ ಬೆಳೆದರು. ಮೋತೀಲಾಲರು ಹೊಸದಾಗಿ ಕಟ್ಟಿಸಿದ ಆನಂದಭವನವೆಂಬ ಹೆಸರಿನ ಮನೆಯು ಅರಮನೆಯಂತೆಯೇ ಇತ್ತು.

ಮೋತೀಲಾಲರು ಸಿಟ್ಟಿನ ಸ್ವಭಾವದವರು. ಜವಾಹರರಿಗೆ ಅವರ ಬಗ್ಗೆ ಹೆದರಿಕೆಯಿತ್ತು. ಒಮ್ಮೆ ಜವಾಹರರು ಚೆನ್ನಾಗಿ ಪೆಟ್ಟು ತಿಂದರು. ಆದದ್ದು ಇಷ್ಟೇ. ಮೋತೀಲಾಲರ ಕೋಣೆಯಲ್ಲಿ ಮೇಜಿನ ಮೇಲೆ ಎರಡು ಪೆನ್ನುಗಳಿದ್ದವು. ಅವನ್ನು ನೋಡಿದಾಗ ಬಾಲಕ ಜವಾಹರರು ‘‘ಎರಡು ಪೆನ್ನುಗಳಿಂದ ಯಾರಾದರೂ ಬರೆಯುತ್ತಾರೆಯೇ, ಒಂದನ್ನು ನಾನು ಇಟ್ಟುಕೊಂಡರೆ ತಪ್ಪೇನು?’’ ಎಂದು ಆಲೋಚಿಸಿ ಒಂದನ್ನು ತೆಗೆದುಕೊಂಡರು. ಆ ಬಳಿಕ ತಂದೆ ಪೆನ್ನು ಕಾಣದೆ ಎಲ್ಲರನ್ನು ಕೇಳಿದರು. ಮಗನನ್ನು ಕೇಳಿದಾಗ ತಾನು ತೆಗೆದುಕೊಂಡಿಲ್ಲವೆಂದ. ಆದರೆ ಹುಡುಕಿದಾಗ ಮಗನ ಬಳಿ ಸಿಕ್ಕಿಬಿಟ್ಟಿತು. ಮಗನಿಗೆ ಚೆನ್ನಾಗಿ ಏಟುಬಿದ್ದವು!

ಹೀಗೆ ಸಿಟ್ಟಿನ ಸ್ವಭಾವವಿದ್ದರೂ ತಂದೆಗೆ ಮಗನ ಮೇಲೆ ಬಹಳ ಪ್ರೇಮವಿತ್ತು. ಮಗನಿಗೆ ಒಳ್ಳೆ ಶಿಕ್ಷಣ ಕೊಡಿಸಬೇಕೆಂದು ಮನೆಯಲ್ಲಿಯೇ ಉತ್ತಮ ಶಿಕ್ಷಕರನ್ನಿಟ್ಟರು. ಆಗಿನ ಕಾಲದ ವಿದ್ಯಾವಂತರಂತೆ ಮೋತೀಲಾಲರಿಗೂ ಇಂಗ್ಲಿಷ್ ಭಾಷೆಯ ಬಗ್ಗೆ ಬಹಳ ಮೋಹವಿತ್ತು. ಅದಕ್ಕಾಗಿ ಮಗನಿಗೆ ಇಂಗ್ಲಿಷ್ ಶಿಕ್ಷಣ ಕೊಡಿಸಲು ಫರ್ಡಿನೆಂಡ್ ಬ್ರುಕ್ಸ್ ಎಂಬುವನನ್ನು ನೇಮಿಸಿದ್ದರು. ಆತನು ಜವಾಹರರಲ್ಲಿ ಒಳ್ಳೊಳ್ಳೆಯ ಪುಸ್ತಕ ಓದುವ ರುಚಿ ಹುಟ್ಟಿಸಿದ. ಈ ರುಚಿಯು ಜವಾಹರರಿಗೆ ವಿದ್ಯಾರ್ಥಿಯಾಗಿದ್ದಾಗ ಮತ್ತು ಮುಂದೆಯೂ ಬಹಳ ಸಹಾಯಕವಾಯಿತು. ಚಿಕ್ಕಂದಿನಲ್ಲಿ ಜವಾಹರರೊಡನೆ ಆಟವಾಡಲು ಆನಂದಭವನದಲ್ಲಿ ಸಣ್ಣ ಹುಡುಗರು ಇರಲಿಲ್ಲ. ಅವರ ತಂಗಿ ಸ್ವರೂಪಕುಮಾರಿ-ಮುಂದೆ ಶ್ರೀಮತಿ ವಿಜಯಲಕ್ಷಿ  ಪಂಡಿತ್ ಎಂದು ಹೆಸರಾದರು ಹುಟ್ಟದ್ದು 1900ರ ಆಗಸ್ಟ್ 18 ರಂದು. ಕಿರಿಯ ತಂಗಿ ಕೃಷ್ಣಾ-ಮುಂದೆ ಶ್ರೀಮತಿ ಕಷ್ಣಾ ಹಥೀಸಿಂಗ-ಹುಟ್ಟಿದ್ದು ೧೯೦೭ ರ ನವಂಬರ್ 2ರಂದು. ಆದರೆ ಜವಾಹರರಿಗೆ ಅವರ ಕಕ್ಕಿ ರಾಮಾಯಣ-ಮಹಾಭಾರತಗಳ ಕಥೆಗಳನ್ನೂ, 1857ರ ಸ್ವಾತಂತ್ರ  ಸಮರದಲ್ಲಿ ಹೋರಾಡಿದ ದೇಶಭಕ್ತ ವೀರರ ಕಥೆಗಳನ್ನೂ   ಹೇಳುತ್ತಿದ್ದರು. ಇದರಿಂದ ಜವಾಹರರಿಗೆ ನಮ್ಮ ದೇಶದ ಹಿರಿಮೆ ತಿಳಿಯುತ್ತಿತ್ತು. ನಮ್ಮ ದೇಶವನ್ನು ಆಳುತ್ತಿದ್ದ ಬ್ರಿಟಿಷರು ನಡೆಸುವ ಅತ್ಯಾಚಾರಗಳ ಬಗ್ಗೆ ಹಿರಿಯರು ಮಾತನಾಡುವುದನ್ನು ಜವಾಹರರು ಬಹಳ ಕುತೂಹಲದಿಂದ ಕೇಳುತ್ತಿದ್ದರು. ಭಾರತೀಯರಿಗೆ ಎಲ್ಲಿಯೂ ಗೌರವದ ಸ್ಥಾನ-ಮಾನವಿರಲಿಲ್ಲ. ಉಪಾಹಾರ ಗೃಹಗಳಲ್ಲಿ, ರೈಲುಡಬ್ಬಿಗಳಲ್ಲಿ, ಸಾರ್ವಜನಿಕ ಉದ್ಯಾನಗಳಲ್ಲಿ- ಹೀಗೆ ಎಲ್ಲ ಕಡೆ ಬ್ರಿಟಿಷರಿಗೆ ಪ್ರತ್ಯೇಕ ಆಸನ ವ್ಯವಸ್ಥೆಯಿರುತ್ತಿತ್ತು. ಬ್ರಿಟಿಷರು ಭಾರತೀಯರನ್ನು ಬಹಳ ಕೀಳುಭಾವನೆಯಿಂದ ಕಾಣುತ್ತಿದ್ದರು. ಇದೆಲ್ಲ ಕೇಳಿದಾಗ ಬಾಲಕ ಜವಾಹರರಿಗೆ ಬ್ರಿಟಿಷರ ಮೇಲೆ ಸಿಟ್ಟು ಬರುತ್ತಿತ್ತು.

ಇಂಗ್ಲೆಂಡಿನಲ್ಲಿ

ಜವಾಹರರಿಗೆ 15 ವರುಷ ದಾಟಿದಾಗ ಮೋತಿಲಾಲರು ಅವರನ್ನು ಇಂಗ್ಲೆಂಡಿನಲ್ಲಿ ಹ್ಯಾರೋಎಂಬ ಸಾರ್ವಜನಿಕ ಶಾಲೆಗೆ ಸೇರಿಸಿದರು. ಅಲ್ಲಿ ಜವಾಹರರು ಬೀಜಗಣಿತ, ರೇಖಾಗಣಿತ, ಇತಿಹಾಸ, ಸಾಹಿತ್ಯ ಮುಂತಾದ ಎಲ್ಲ ವಿಷಯಗಳಲ್ಲಿ ಉತ್ತಮ ವಿದ್ಯಾರ್ಥಿಯೆಂದು ಹೆಸರು ಪಡೆದು ಬಹುಮಾನ ಗಳಿಸಿದರು. ಜವಾಹರರು ಇಂಗ್ಲೆಂಡಿಗೆ ಹೋದರೂ ಭಾರತದಲ್ಲಿ ನಡೆಯುತ್ತಿದ್ದ ಸಂಗತಿಗಳನ್ನು ತಿಳಿಯಲು ಉತ್ಸುಕರಾಗಿದ್ದರು ಮತ್ತು ಒಳ್ಳೊಳ್ಳೆಯ ಭಾರತೀಯ ಪತ್ರಿಕೆಗಳನ್ನು ತರಿಸಿಕೊಂಡು ಓದುತ್ತಿದ್ದರು.

1912 ರ ಆಗಸ್ಟ್ ತಿಂಗಳಲ್ಲಿ ಭಾರತಕ್ಕೆ ಮರಳಿದ ಬಳಿಕ ಜವಾಹರರು ತಂದೆಯವರೊಡನೆ ವಕೀಲಿವೃತ್ತಿ ಪ್ರಾರಂಭಿಸಿದರು. ಅವರು ತೆಗೆದುಕೊಂಡ ಮೊದಲನೆಯ ಪ್ರಕರಣದಿಂದ ಅವರಿಗೆ ೫೦೦ ರೂಪಾಯಿ ಶುಲ್ಕ ಬಂದಿತು. 1916 ರ ಫೆಬ್ರವರಿ 8 ರ ವಸಂತಪಂಚಮಿಯ ದಿನ ದಿಲ್ಲಿಯಲ್ಲಿ ಜವಾಹರರ ಮದುವೆ ಬಹಳ ವೈಭವದಿಂದ ನೆರವೇರಿತು. ಅವರ ಪತ್ನಿ ಕಮಲಾ. ಆಕೆಯೂ ಸಹ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಕೀರ್ತಿ ಗಳಿಸಿದರು. ಜವಾಹರರಿಗೆ ಒಬ್ಬಳೇ ಮಗಳು, ಇಂದಿರಾ ಪ್ರಿಯದರ್ಶಿನಿ.

ಜವಾಹರರ ಜೀವನ ನಾಡಿನ ಸ್ವಾತಂತ್ರ ದ ಹೋರಾಟದ ಒಂದು ಭಾಗವಾಗಿ ಹೋಯಿತು. ದೇಶದ ಸ್ವಾತಂತ್ರ ಕ್ಕಾಗಿ ಹೋರಾಟ ನಡೆದಾಗ ಅವರು ನಾಲ್ಕು ಬಾರಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಗೊಂಡರು. ಅವರ ಇಡೀ ಜೀವನ ದೇಶಕ್ಕಾಗಿ ಸಮರ್ಪಿತವಾಗಿತ್ತು. ಅವರು ಸರ್ವಶಕ್ತಿಯಿಂದ ಸದಾಕಾಲವೂ ದೇಶಕ್ಕಾಗಿ ದುಡಿಯುತ್ತ ಮುಂದೆ ಮುಂದೆ ಸಾಗಿದರು. ಸೆರೆಮನೆಯಲ್ಲೇ ಇರಲಿ, ಹೊರಗೇ ಇರಲಿ, ಜವಾಹರರು ಯಾವಾಗಲೂ ದೇಶದ ಸ್ವಾತಂತ್ರ , ದೇಶದ ಉನ್ನತಿ, ದೇಶದ ಪ್ರಗತಿ ಇವುಗಳ ಚಿಂತೆಯನ್ನೇ ಮಾಡುತ್ತಿದ್ದರು.

ಭಾರತದ ಪ್ರಧಾನಿ

ಸ್ವತಂತ್ರ ಭಾರತಕ್ಕೆ  ಜವಾಹರಲಾಲ್ ನೆಹರೂ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಸ್ವತಂತ್ರಭಾರತದ ಮೊದಲನೆಯ ಪ್ರಧಾನಮಂತ್ರಿಯಾಗಿ ದೇಶದ ಪ್ರಗತಿ ಸಾಧಿಸುವ ಪೂರ್ಣ ಹೊಣೆ ಹೊರಬೇಕಾಯಿತು. ಹದಿನೇಳು ವರ್ಷಕಾಲ ಅವರು ಸ್ವತಂತ್ರ ಭಾರತದ ಪ್ರಧಾನಿಯಾಗಿದ್ದರು. ಈ ಕಾಲದಲ್ಲಿ ಅವರು ನಮ್ಮ ದೇಶದ ಉನ್ನತಿಗಾಗಿಯಷ್ಟೇ ಅಲ್ಲ, ಇಡೀ ಜಗತ್ತಿನಲ್ಲಿ ಶಾಂತಿ ಸ್ಥಾಪಿಸಲು ಹೆಣಗಾಡಿದರು.

 ಭಾರತ ರತ್ನ

 1955ರಲ್ಲಿ ದೇಶದ ಜನತೆಯ ಪರವಾಗಿ ರಾಷ್ಟ್ರಪತಿಯವರು ಜವಾಹರರಿಗೆ ಭಾರತರತ್ನಪದವಿ ನೀಡಿ ಗೌರವಿಸಿದರು.
 ನಮ್ಮ ದೇಶದ ಉನ್ನತಿಗಾಗಿ ಚಾಚಾ ನೆಹರೂ ಕೊಟ್ಟ ಮಂತ್ರವೆಂದರೆ ‘‘ಆರಾಮ್ ಹರಾಮ್ ಹೈ.’’ ನಾವು ಎಂದಿಗೂ ಸೋಮಾರಿಗಳಾಗಬಾರದೆಂಬುದೇ ಆ ಮಂತ್ರದ ಅರ್ಥ.


ಸಾಹಿತಿ ನೆಹರು



ಜವಾಹರರು ಸಾಹಿತಿಗಳೂ ಆಗಿದ್ದರು. ಚಿಕ್ಕಂದಿನಿಂದಲೂ ಅವರಿಗೆ ಪುಸ್ತಕಗಳನ್ನು ಓದುವುದೆಂದರೆ ಬಹು ಆಸಕ್ತಿ. ದಿನವಿಡೀ ಬೇರೆ ಬೇರೆ ಕೆಲಸಗಳಿಂದ ದಣಿವಾದರೂ ಅವರು ರಾತ್ರಿ ಮಲಗುವ ಮುಂಚೆ ಸ್ವಲ್ಪ ಸಮಯ ಉತ್ತಮ ಪುಸ್ತಕ ಓದುತ್ತಿದ್ದರು. ಅವರಿಂದ ಇಂಗ್ಲಿಷ್ ಭಾಷೆಯಲ್ಲಿ ರಚಿತವಾದ ಮೂರು ಪುಸ್ತಕಗಳು ಜಗತ್ಪ್ರಸಿದ್ಧವಾಗಿವೆ. ಸಹಜವಾಗಿ ಅನುಕಂಪ ತೋರುವ ಹೃದಯ, ಯಾವ ಸಮಸ್ಯೆಯನ್ನೂ ವಿಶಾಲವಾದ ದೃಷ್ಟಿಯಿಂದ ಕಾಣುವ ವಿವೇಕ ಅವರ ಎಲ್ಲ ಪುಸ್ತಕಗಳಲ್ಲಿ ಕಾಣುತ್ತವೆ.

 ದೀಪ ಆರಿತು


1964ರ ಮೇ 27

ರಂದು ನೆಹರು ನಿಧನರಾದರು. ಎಲ್ಲ ದೇಶಗಳ ಪ್ರಮುಖರು ಅಂತಿಮಯಾತ್ರೆಯಲ್ಲಿ ಭಾಗವಹಿಸಿ ತಮ್ಮ ಗೌರವ ಸಲ್ಲಿಸಿದರು.

 ಅಪೂರ್ವ ದೇಶಭಕ್ತರು ಅಪೂರ್ವ ವ್ಯಕ್ತಿ
 ಭಾರತ ಯುಗಧರ್ಮಕ್ಕೆ ಅನುಗುಣವಾಗಿ ಬದಲಾಗಬೇಕು, ತನ್ನ ಚಿಂತನೆ-ಸಂಸ್ಕೃತಿಗಳಲ್ಲಿ ಸತ್ವವಿರುವುದನ್ನು ಉಳಿಸಿಕೊಳ್ಳಬೇಕು, ಆದರೆ ಹೊಸ ಜ್ಞಾನ ಹೊಸ ಚಿಂತನೆಗಳಿಗೆ ಮನಸ್ಸನ್ನು ತೆರೆದಿರಬೇಕು ಎಂದು ನೆಹರೂ ಅವರು ಸಾರಿದರು. ಒಟ್ಟಿನಲ್ಲಿ ಅವರು ಅಪೂರ್ವ ದೇಶಭಕ್ತರು. ಅಪೂರ್ವ ಸ್ನೇಹಪರರಾದ, ಹೃದಯವಂತಿಕೆಯ ವ್ಯಕ್ತಿ.

ವಿನಾಯಕ ದಾಮೋದರ ಸಾವರ್ಕರ್

ವಿನಾಯಕ ದಾಮೋದರ ಸಾವರ್ಕರ್

ವಿನಾಯಕ ದಾಮೋದರ ಸಾವರ್ಕರ್ ತಮ್ಮ ಸಂಪೂರ್ಣ ಜೀವನವನ್ನೇ ಭಾರತದ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟ ಮಹಾನ್ ವಾಗ್ಮಿ, ವಿವಿಧ ವಿಷಯಗಳ ಬಗ್ಯೆ ನಿರರ್ಗಳವಾಗಿ ಬರೆಯಬಲ್ಲ ಲೇಖಕ, ಇತಿಹಾಸಕಾರ, ಕವಿ, ತತ್ವಶಾಸ್ತ್ರಜ್ಞ, ಮತ್ತು ಸಮಾಜಸೇವಕ. ಅವರನ್ನು ಕೆಲವರು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಅತಿ ದೊಡ್ಡ ಕ್ರಾಂತಿಕಾರಿ ಎಂದು ಪರಿಗಣಿಸಿದರೆ, ಇನ್ನು ಕೆಲವರು, ಅವರನ್ನು ಕೋಮುವಾದಿಯಾಗಿಯೂ, ಚಾಣಕ್ಯನೀತಿಯವರಾಗಿಯೂ ಭಾವಿಸುತ್ತಾರೆ. ಸ್ವಾತಂತ್ರ್ಯ ಅಂದೋಲನದ ಇತಿಹಾಸದ ಅತ್ಯಂತ ವಿವಾದಾತ್ಮಕ ವ್ಯಕ್ತಿಗಳಲ್ಲಿ ಸಾವರ್ಕರ್ ಪ್ರಮುಖರು.

ಹಿನ್ನೆಲೆ

   ವಿನಾಯಕರು ಮೇ ೨೮, ೧೮೮೩ ರಲ್ಲಿ ಜನಿಸಿದರು. ಸಂಸ್ಕೃತ ವಿದ್ವಾಂಸರ ಪೀಳಿಗೆಯಲ್ಲಿ ಹುಟ್ಟಿದ ಸಾವರ್ಕರರಿಗೆ ಇತಿಹಾಸ, ರಾಜನೀತಿ, ಸಾಹಿತ್ಯ, ಭಾರತಿಯ ಸಂಸ್ಕೃತಿಗಳಲ್ಲಿ ಅತ್ಯಂತ ಆಸಕ್ತಿ. ಅವರು ಬರೆದ ಪುಸ್ತಕ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ - 1857” ಅಸಂಖ್ಯಾತ ಸ್ವಾತಂತ್ರ್ಯ ಯೋಧರಿಗೆ ಸ್ಪೂರ್ತಿದಾಯಕವಾಗಿತ್ತು. ದಾಮೋದರಪಂತ ಮತ್ತು ರಾಧಾಬಾಯಿಯ ನಾಲ್ಕು ಮಕ್ಕಳಲ್ಲಿ ಒಬ್ಬರಾದ ವಿನಾಯಕ ಹುಟ್ಟಿದ್ದು ಮಹಾರಾಷ್ಟ್ರದ ನಾಸಿಕ ಪಟ್ಟಣದ ಹತ್ತಿರದ ಭಾಗೂರು ಎಂಬಲ್ಲಿ. ನಾಸಿಕದ ಶಿವಾಜಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವಾಯಿತು. *ಒಂಭತ್ತನೆಯ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡು, ತಂದೆಯ ಪೋಷಣೆಯಲ್ಲಿ ಬೆಳೆದ ವಿನಾಯಕ ಬ್ರಿಟಿಷರ ವಿರುಧ್ಧದ ಸ್ವಾತಂತ್ರ್ಯ ಹೋರಾಟದತ್ತ ಆಕರ್ಷಿತನಾದ. 1899ರಲ್ಲಿ ದೇಶವನ್ನು ಮುತ್ತಿದ ಪ್ಲೇಗ್ ಪಿಡುಗಿಗೆ ಅವನ ತಂದೆ ತುತ್ತಾದರು.

1901ರಲ್ಲಿ ಯಮುನಾಬಾಯಿಯೊಂದಿಗೆ ಮದುವೆಯಾಯಿತು. 1902ರಲ್ಲಿ ಪುಣೆಯ ಫರ್ಗ್ಯೂಸನ್ ಕಾಲೇಜನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸೇರಿದರು. ಜೂನ್ 1906ರಲ್ಲಿ ಶಿಷ್ಯವೃತ್ತಿ ದೊರೆತದ್ದರಿಂದ , ಕಾನೂನು ಶಾಸ್ತ್ರ ವ್ಯಾಸಂಗಕ್ಕಾಗಿ ಲಂಡನ್ ತೆರಳಿದರು.

ಸ್ವಾತಂತ್ರ್ಯ ಹೋರಾಟಗಾರ

   ಸಾವರ್ಕರ್ ವಿದ್ಯಾರ್ಥಿಯಾಗಿದ್ದಾಗ ಸ್ವದೇಶಿ ಚಳುವಳಿಯಲ್ಲಿ ಭಾಗವಹಿಸಿದ್ದರು. ನಂತರ ಅವರು ತಿಲಕ್ರ ಸ್ವರಾಜ್ಯ ಪಕ್ಷದ ಸದಸ್ಯರಾದರು. ಲಂಡನ್ನಿನಲ್ಲಿದ್ದಾಗ ಸ್ವತಂತ್ರ ಭಾರತ ಸಮಾಜ” (Free India Society)ವನ್ನು ಸ್ಥಾಪಿಸಿದರು. ಈ ಸಂಸ್ಥೆ ಭಾರತೀಯ ಪಂಚಾಂಗ ದ ಹಬ್ಬಗಳೇ ಮೊದಲಾದ ಮುಖ್ಯ ತಿಥಿಗಳನ್ನು , ಸ್ವಾತಂತ್ರ್ಯ ಸಂಗ್ರಾಮದ ಮೈಲಿಗಲ್ಲುಗಳನ್ನೂ ಆಚರಿಸುತ್ತಿತ್ತು. ಭಾರತದ ಸ್ವಾತಂತ್ರ್ಯದ ಬಗ್ಯೆ ಮಾತುಕತೆಗಳಿಗಾಗಿ ಮುಡಿಪಾಗಿದ್ದ ಈ ಸಂಸ್ಥೆಯ ಮೇಲೆ ಬ್ರಿಟಿಷ್ ಸತ್ತೆಯ ಕೆಂಗಣ್ಣು ಬೀಳಲು ತಡವಾಗಲಿಲ್ಲ.

   ಬ್ರಿಟಿಷ್ ಅಧಿಕಾರಿಗಳ ಬಗೆಗೇ ಆಗಲಿ, ಅವರ ಕಾನೂನುಗಳ ಬಗೆಗೆ ಆಗಲಿ, ಗೊಣಗುವುದರಲ್ಲಿ ಅರ್ಥವಿಲ್ಲ. ಅದಕ್ಕೆ ಕೊನೆಯೂ ಇಲ್ಲ. ನಮ್ಮ ಚಳುವಳಿ ಯಾವುದೇ ನಿರ್ದಿಷ್ಟ ಕಾನೂನನ್ನು ವಿರೋಧಿಸುವುದಕ್ಕಷ್ಟೇ ಸೀಮಿತವಾಗದೆ, ಆ ಕಾನೂನುಗಳನ್ನು ರಚಿಸಿ, ಜಾರಿಗೆ ತರುವ ಹಕ್ಕಿಗಾಗಿ ಇರಬೇಕು. ಅರ್ಥಾತ್, ಸಂಪೂರ್ಣ ರಾಜಕೀಯ ಸ್ವಾತಂತ್ರ್ಯವೇ ನಮ್ಮ ಗುರಿಯಾಗಬೇಕುಎಂದು ಸಾವರ್ಕರರು ಹೇಳಿದ್ದರೆಂದು ನಂಬಲಾಗಿದೆ.

   1908ರಲ್ಲಿ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ- 1857 ” ಬರೆದಾಗ, ಬ್ರಿಟಿಷ್ ಸರಕಾರವು ತಕ್ಷಣವೇ ಭಾರತ ಮತ್ತು ಬ್ರಿಟನ್ನುಗಳಲ್ಲಿ ಅದರ ಪ್ರಕಾಶನವನ್ನು ನಿರ್ಬಂಧಿಸಿತು. ಮುಂದೆ ಭಿಕಾಜಿ ಕಾಮಾ ಅದನ್ನು ಹಾಲೆಂಡಿನಲ್ಲಿ ಪ್ರಕಾಶಿಸಿದರು. ಅಲ್ಲಿಂದ ಅದನ್ನು ಗುಪ್ತವಾಗಿ ಭಾರತಕ್ಕೆ ಸಾಗಿಸಿ ಬ್ರಿಷರ ವಿರುಧ್ಧ ಸಕ್ರಿಯರಾಗಿದ್ದ ಕ್ರಾಂತಿಕಾರಿಗಳಿಗೆ ಹಂಚಲಾಯಿತು.

  1909ರಲ್ಲಿ , ಸಾವರ್ಕರರ ನಿಕಟ ಅನುಯಾಯಿ, ಮದನಲಾಲ್ ಧಿಂಗ್ರಾ, ಆಗಿನ ವೈಸರಾಯ್ ಲಾರ್ಡ್ ಕರ್ಜನ್ನನ ವಧೆಯ ಪ್ರಯತ್ನ ವಿಫಲವಾದ ನಂತರ, ಸರ್ ವಾಯ್ಲೀ ಎಂಬ ಅಧಿಕಾರಿಯನ್ನು ಗುಂಡಿಕ್ಕಿ ಕೊಂದ. ಇದರ ಫಲವಾಗಿ ಉಂಟಾದ ರಾಜಕೀಯ ಗೊಂದಲದಲ್ಲಿ, ಸಾವರ್ಕರ್ ಈ ಘಟನೆಯನ್ನು ಖಂಡಿಸಲು ನಿರಾಕರಿಸಿ , ಎದ್ದು ಕಾಣಿಸಿಕೊಂಡರು. ನಾಸಿಕ್ ಪಟ್ಟಣದ ಕಲೆಕ್ಟರ್ ಎ.ಎಂ.ಟಿ. ಜಾಕ್ಸನ್ ಯುವಕನೊಬ್ಬನ ಗುಂಡಿಗೆ ಬಲಿಯಾದಾಗ, ಸಾವರ್ಕರ್ ಕೊನೆಗೂ ಬ್ರಿಟಿಷ್ ಅಧಿಕಾರಿಗಳ ಬಲೆಯಲ್ಲಿ ಸಿಕ್ಕಿದರು.

   ಇಂಡಿಯಾ ಹೌಸ್ ನೊಂದಿಗೆ ಸಾವರ್ಕರರ ಸಂಪರ್ಕವನ್ನೇ ನೆಪಮಾಡಿ ಅವರನ್ನು ಈ ಕೊಲೆಯಲ್ಲಿ ಅಪರಾಧಿ ಎಂದು ನಿರ್ಣಯಿಸಲಾಯಿತು. 13ನೇ ಮಾರ್ಚ್ 1910ರಂದು ಅವರ ವಿರುದ್ಧ ಬಂಧನದ ವಾರಂಟ್ ಹೊರಡಿಸಿ, ನಂತರ ಪ್ಯಾರಿಸಿನಲ್ಲಿ ಅವರನ್ನು ಬಂಧಿಸಲಾಯಿತು. ಮಾರ್ಸೇಲ್ಸ್ ನಿಂದ ಪರಾರಿಯಾಗುವ ಅವರ ಧೀರ ಪ್ರಯತ್ನ ವಿಫಲವಾಯಿತು. ಅವರನ್ನು ಹಿಡಿದು ಮುಂಬಯಿಗೆ ಎಸ್.ಎಸ್.ಮೊರಿಯಾಹಡಗಿನಲ್ಲಿ ತಂದು, ಯೆರವಡಾ ಜೈಲಿನಲ್ಲಿ ಬಂಧಿಸಲಾಯಿತು.

    ಅವರ ವಿರುದ್ಧದ ಮೊಕದ್ದಮೆಯಲ್ಲಿ , ಆಗಿನ್ನೂ 27ರ ತರುಣನಾಗಿದ್ದ ಅವರಿಗೆ, ಕುಪ್ರಸಿದ್ಧ ಅಂಡಮಾನಿನ ಜೈಲಿನಲ್ಲಿ 50 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲಾಯಿತು. ನಾಲ್ಕು ಜುಲೈ, 1911ರಂದು, ಅವರನ್ನು ಅಂಡಮಾನಿಗೆ ಸಾಗಿಸಲಾಯಿತು. ಸಾವರ್ಕರ್ 1911ರಲ್ಲಿ , ಮತ್ತೆ 1913ರಲ್ಲಿ, ಸರ್ ರೆಜಿನಾಲ್ಡ್ ಕ್ರಾಡ್ಡಾಕ್ ನ ಭೇಟಿಯ ಸಮಯದಲ್ಲಿ ಕ್ಷಮೆಗಾಗಿ ಬ್ರಿಟಿಷ್ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದರು.

ಆಗಿನ ಬ್ರಿಟಿಷ್ ಆಡಳಿತ ರಾಜಕೀಯ ಖೈದಿಗಳಿಗೆ ಸೆರೆಮನೆಯಲ್ಲಿ ನೀಡುತ್ತಿದ್ದ ಚಿತ್ರಹಿಂಸೆ ಹಾಗೂ ಸಾವರ್ಕರರ ಕೆಡುತ್ತಿದ್ದ ಆರೋಗ್ಯ ಈ ಹಿನ್ನೆಲೆಯಲ್ಲಿ ಸಾವರ್ಕರರ ಕ್ಷಮಾ ಅರ್ಜಿಯನ್ನು ನೋಡಬೇಕು ಎಂದು ಅವರ ಸಮರ್ಥಕರು ಅಭಿಪ್ರಾಯಪಡುತ್ತಾರೆ. ಮತ್ತೆ ಭಾರತದ ಭೂಮಿಗೆ ಹಿಂದಿರುಗಿ , ಬ್ರಿಟಿಷರ ವಿರುದ್ಧ ಹೋರಾಟಕ್ಕೆ ತೊಡಗುವ ಚಾಣಾಕ್ಷ ಉದ್ದೇಶದಿಂದ ಅವರು ಕ್ಷಮೆ ಕೇಳಿರಬಹುದು ಎಂಬ ಅಭಿಪ್ರಾಯವೂ ಇದೆ. ಇದಕ್ಕೆ ವಿರುದ್ಧವಾಗಿ, ಈ ಕ್ರಿಯೆ ಬ್ರಿಟಿಷರ ವಿರುದ್ಧ ಸಾವರ್ಕರರ ಶರಣಾಗತಿ ಎಂದು ಅವರ ಟೀಕಾಕಾರರು ಭಾವಿಸುತ್ತಾರೆ.

ಅದು ಹೇಗೇ ಇದ್ದರೂ, ಸಾವರ್ಕರರ ಈ ಕ್ರಮ ಮುಂದೆ ಬಹಳಷ್ಟು ಕಾಲದವರೆಗೆ ವಿವಾದವನ್ನು ಸೃಷ್ಟಿಸಿದ ವಿಷಯಗಳಲ್ಲಿ ಮೊದಲನೆಯದಾಗಿತ್ತು. 1920ರಲ್ಲಿ ವಿಠ್ಠಲಭಾಯಿ ಪಠೇಲ್, ಮಹಾತ್ಮ ಗಾಂಧಿ, ಬಾಲ ಗಂಗಾಧರ ತಿಲಕ ಮುಂತಾದ ಹಿರಿಯ ಧುರೀಣರು ಕೇಂದ್ರೀಯ ಸಂಸತ್ತಿನಲ್ಲಿ ಸಾವರ್ಕರ್ ಹಾಗೂ ಅವರ ಬಿಡುಗಡೆಗಾಗಿ ಒತ್ತಾಯಿಸಿದರು. ಮೇ 12, 1921ರಂದು ಸಾವರ್ಕರರನ್ನು ರತ್ನಾಗಿರಿ ಜೈಲಿಗೆ, ಮತ್ತೆ ಅಲ್ಲಿಂದ ಯೆರವಡಾ ಜೈಲಿಗೆ, ಸಾಗಿಸಲಾಯಿತು. ಅವರು ಹಿಂದುತ್ವಕೃತಿ ಬರೆದದ್ದು ರತ್ನಾಗಿರಿಯ ಜೈಲಿನಲ್ಲಿದ್ದಾಗ. ಅವರ ಚಟುವಟಿಕೆಗಳಿಗೆ ಹಾಗೂ ತಿರುಗಾಟಕ್ಕೆ ತೀವ್ರ ನಿರ್ಬಂಧಗಳನ್ನು ಹಾಕಿ, ಜನವರಿ 6,1924ರಂದು ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು.

ರಾಜಕಾರಣಿ

ಸಾವರ್ಕರ್ ಸ್ವತಃ ನಾಸ್ತಿಕರಾಗಿದ್ದರೂ ಕೂಡಾ, ಇಷ್ಟವಿಲ್ಲದಿದ್ದರೂ ಹಿಂದೂ ಮಹಾಸಭೆಯ ಅಧ್ಯಕ್ಷ ಪದವನ್ನು ಒಪ್ಪಿಕೊಳ್ಳಬೇಕಾಯಿತು. ಅವರು ಆ ಪದವಿಯಲ್ಲಿ ಇದ್ದ ಏಳು ವರ್ಷಗಳಲ್ಲಿ , ಮಹಾಸಭೆಯನ್ನು ಸ್ವತಂತ್ರ ರಾಜಕೀಯ ಪಕ್ಷವನ್ನಾಗಿ ಬೆಳೆಸಲು ಅಗಾಧ ಕೊಡುಗೆ ನೀಡಿದರು. ಬ್ರಿಟಿಷರು ಜರ್ಮನಿಯ ಮೇಲೆ ಯುದ್ಧ ಹೂಡಿ ಅದರಲ್ಲಿ ಭಾರತವನ್ನೂ ಎಳೆದುಕೊಂಡಾಗ, ಸಾವರ್ಕರ್ ಮಾನವ ಸ್ವಾತಂತ್ರ್ಯದ ಹಕ್ಕನ್ನು ಕಾಪಾಡುವುದಾಗಿ ಹೇಳಿಕೊಳ್ಳುವ ಬ್ರಿಟಿಷರ ನೀತಿ ಅರ್ಥಹೀನಎಂದರು.

  ಆದಾಗ್ಯೂ, ಬ್ರಿಟಿಷರಿಗೆ ಜರ್ಮನಿ ಮತ್ತು ಜಪಾನಿನ ವಿರುದ್ಧದ ಯುದ್ಧದಲ್ಲಿ ಸಹಾಯ ಮಾಡುವಂತೆ ಅವರು ಹಿಂದೂ ಸಮಾಜಕ್ಕೆ ಕರೆ ಕೊಟ್ಟರು. ಅವರ ಸಮರ್ಥಕರು ಈ ಕ್ರಮವನ್ನು ಹಿಂದೂ ಸಮಾಜಕ್ಕೆ ಮಿಲಿಟರಿ ತರಬೇತಿ ದೊರಕಿಸಿಕೊಂಡು ಮುಂದೆ ಬ್ರಿಟಿಷರ ಮೇಲೆ ಬೀಳುವ ಉದ್ದೇಶದಿಂದ ತೆಗೆದುಕೊಂಡದ್ದಾಗಿತ್ತು ಎಂದು ಅರ್ಥೈಸಿದರೂ, ಅವರ ವಿರೋಧಿಗಳು ಇದನ್ನು ಬ್ರಿಟಿಷ್ ಹಿತಾಸಕ್ತಿಗಳಿಗೆ ಹೊಂದಿಕೊಳ್ಳುವ ಸಾವರ್ಕರರ ಮತ್ತೊಂದು ಉದಾಹರಣೆಯಾಗಿ ಕಂಡರು.

  ಸಾವರ್ಕರರ ಅಧ್ಯಕ್ಷತೆಯಲ್ಲಿ ಮಹಾಸಭಾ, 1942 ರ ಭಾರತ ಬಿಟ್ಟು ತೊಲಗಿ ಅಂದೋಲನವನ್ನು ಬೆಂಬಲಿಸಲಿಲ್ಲ. ಕಮ್ಯೂನಿಸ್ಟ್ ಪಾರ್ಟಿ ಹಾಗೂ ಮುಸ್ಲಿಮ್ ಲೀಗ್ ಕೂಡಾ ಈ ಅಂದೋಲನವನ್ನು ಸಮರ್ಥಿಸಲಿಲ್ಲ. ಸ್ವಾತಂತ್ರ್ಯೋತ್ತರ ಭಾರತವು, ಸುಧೃಢವಾಗಿಯೂ, ಒಗ್ಗಟ್ಟಿನಿಂದಲೂ ಹಾಗೂ ಸ್ವಾವಲಂಬಿಯೂ ಆಗಿರಬೇಕೆಂಬ ಅಪೇಕ್ಷೆ ಅವರಿಗಿತ್ತು

ಸ್ವಾಮಿ ವಿವೇಕನಂದ

ಸ್ವಾಮಿ ವಿವೇಕಾನಂದರ ಜೀವನ





ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.

ಜನನ

ವಿವೇಕಾನಂದರ ಪೂರ್ವದ ಹೆಸರು ನರೇಂದ್ರನಾಥ ದತ್ತ. ಇವರು ೧೮೬೩, ಜನವರಿ ೧೨ರಂದು ಕಲ್ಕತ್ತೆಯಲ್ಲಿ ಜನಿಸಿದರು. ತಂದೆ ವಿಶ್ವನಾಥ ದತ್ತ. ತಾಯಿ ಭುವನೇಶ್ವರಿ ದೇವಿ. ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯರಾದ ಮೇಲೆ 'ವಿವೇಕಾನಂದ' ಎಂಬ ಹೆಸರನ್ನು ಪಡೆದರು. ಕಲ್ಕತ್ತೆಯ ಸ್ಕಾಟಿಷ್ ಚರ್ಚ್ ಕಾಲೇಜಿನಲ್ಲಿ ತತ್ತ್ವಶಾಸ್ತ್ರ ಅಧ್ಯಯನ ಮಾಡಿದರು. ‍

ರಾಮಕೃಷ್ಣರ ಜೊತೆಗೆ

ನರೇಂದ್ರರಿಗೆ ರಾಮಕೃಷ್ಣರ ಮೊದಲ ಪರಿಚಯ ವಿಲಿಯಮ್ ಹೆಸ್ಟಿಯವರ ತರಗತಿಯಲ್ಲಿ. ಹೆಸ್ಟಿಯವರು ವಿಲಿಯಮ್ ವರ್ಡ್ಸ್ವವರ್ತ್ ಅವರ "ದ ಎ‍ಕ್ಸಕರ್ಶನ್" ಎಂಬ ಕವಿತೆಯಲ್ಲಿನ "ಸಮಾಧಿ" ಪದವನ್ನು ವಿವರಿಸುವಾಗ ಸಮಾಧಿಯ ನಿಜವಾದ ಅರ್ಥ ತಿಳಿಯಲು ದಕ್ಷಿಣೇಶ್ವರದ ರಾಮಕೃಷ್ಣರನ್ನೊಮ್ಮೆ ಭೇಟಿ ನೀಡಿ ಎಂದು ಸಲಹೆ ಇತ್ತರು. ಇವರ ಸಲಹೆಯ ಮೇರೆಗೆ ಹಲವಾರು ವಿದ್ಯಾರ್ಥಿಗಳು ರಾಮಕೃಷ್ಣರನ್ನು ನೋಡಲು ಉತ್ಸುಕರಾದರು. ಆವರಲ್ಲಿ ನರೇಂದ್ರರೂ ಒಬ್ಬರು.

೧೮೮೧ನೇ ಇಸವಿ ನವೆಂಬರದಲ್ಲಿ ಎಫ್.ಎ(ಲಲಿತಕಲೆ)ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಿದ್ದಾಗ, ರಾಮಚಂದ್ರದತ್ತರು ರಾಮಕೃಷ್ಣರು ಪ್ರವಚನ ನಡೆಸುತ್ತಿದ್ದರು ಸುರೇಂದ್ರನಾಥ ಮಿತ್ರರ ಮನೆಗೆ ಕರೆದರು. ಅಲ್ಲಿ ರಾಮಕೃಷ್ಣರು ನರೇಂದ್ರನಿಗೆ ಹಾಡಲು ಕೇಳಿಕೊಂಡರು. ಅವರ ಗಾಯನ ಪ್ರತಿಭೆಯನ್ನು ಮೆಚ್ಚಿ ರಾಮಕೃಷ್ಣರು ನರೆಂದ್ರನನ್ನು ದಕ್ಷಿಣೇಶ್ವರಕ್ಕೆ ಬರಲು ಆಮಂತ್ರಿಸಿದರು. ಆದರೆ ನರೇಂದ್ರರು ಅದರ ಬಗ್ಗೆ ಉತ್ಸಾಹ ತೊರಿಸಲಿಲ್ಲ.

೧೮೮೨ ರಲ್ಲಿ ನರೇಂದ್ರರು ತನ್ನ ಇಬ್ಬರು ಗೆಳೆಯರೊಂದಿಗೆ ರಾಮಕೃಷ್ಣರನ್ನು ಭೇಟಿ ಮಾಡಲು ದಕ್ಷಿಣೇಶ್ವರಕ್ಕೆ ಹೋದರು. ರಾಮಕೃಷ್ಣರ ಆ ಭೇಟಿ ಅವರ ಜೀವನಕ್ಕೆ ಮಹತ್ವದ ತಿರುವನ್ನು ಕೊಟ್ಟಿತು. ಆದರೂ ನರೇಂದ್ರರು ರಾಮಕೃಷ್ಣರನ್ನು ಗುರುಗಳನ್ನಾಗಿ ಒಪ್ಪಿಕೊಳ್ಳಲಿಲ್ಲ. ರಾಮಕೃಷ್ಣರ ಆಲೋಚನೆಗಳನ್ನು ಒಪ್ಪಿಕೊಳ್ಳದಿದ್ದರೂ, ಅವರ ಮಗುವಿನಂಥ ವ್ಯಕ್ತಿತ್ವ ಅವರನ್ನು ಪದೇ ಪದೇ ದಕ್ಷಿಣೀಶ್ವರಕ್ಕೆ ಭೇಟಿ ನೀಡಲು ಪ್ರೇರೇಪಿಸಿತು.

ಮೊದಮೊದಲಿಗೆ ರಾಮಕೃಷ್ಣರ ಭಾವಪರವಶತೆಯ ಮತ್ತು ದೂರದೃಷ್ಟಿಯನ್ನು ಕೇವಲ ಕಾಲ್ಪನಿಕ ಬರಿ ಭ್ರಮೆ ಎಂದು ಭಾವಿಸಿದ್ದರು. ೧೮೮೪ ಇಸವಿಯಲ್ಲಿ ಅನಿರೀಕ್ಷಿತವಾಗಿ ನರೇಂದ್ರರ ತಂದೆಯವರು ಇಹಲೋಕ ತ್ಯಜಿಸಿದರು. ಅವರ ಮರಣಾ ನಂತರ ಕುಟುಂಬ ದಿವಾಳಿಯಾಯಿತು, ಸಾಲಗಾರರ ಬಾಧೆ ಶುರುವಾಯಿತು.ಅವರ ಕುಟುಂಬದವರು ಪೂರ್ವಜರ ಮನೆಯಿಂದ ಹೊರಗೆ ಹಾಕಿದರು.

ಅವರು ಕೆಲಸ ಹುಡುಕುವುದರಲ್ಲಿ ವಿಫಲರಾದಾಗ, ದೇವರ ಅಸ್ತಿತ್ವದ ಬಗ್ಗೆಯೇ ಸಂದೇಹಪಟ್ಟರು. ಆದರೆ ರಾಮಕೃಷ್ಣರ ಸಾನಿಧ್ಯ ಅವರಿಗೆ ಸಾಂತ್ವನ ನೀಡುತಿತ್ತು. ಒಂದು ದಿನ ನರೇಂದ್ರರು ಅವರ ಕುಟುಂಬದ ಅಭ್ಯುದಯಕ್ಕೋಸ್ಕರ ಕಾಳಿ ದೇವಿಯನ್ನು ಪ್ರಾರ್ಥಿಸುವಂತೆ ರಾಮಕೃಷ್ಣರನ್ನು ಕೇಳಿಕೊಂಡರು. ಅದಕ್ಕೆ ಅವರು ನೀನೊಬ್ಬನೇ ದೇವಸ್ಥಾನಕ್ಕೆ ಹೋಗಿ ಭಕ್ತಿಯಿಂದ ಪ್ರಾರ್ಥಿಸು ಎಂದು ಸಲಹೆ ನೀಡಿದರು. ಅವರ ಸಲಹೆಯಂತೆ ಎರಡು, ಮೂರು ಸಲ ದೇವಸ್ಥಾನಕ್ಕೆ ಹೋದರು.

ಆದರೆ ಅವರು ಯಾವುದೇ ರೀತಿಯ ಲೌಕಿಕ ಅವಶ್ಯಕತೆಗಳನ್ನು ಪೂರೈಸಲು ದೇವಸ್ಥಾನಕ್ಕೆ ಹೋಗಿ ಪ್ರಾರ್ಥಿಸುವುದರಲ್ಲಿ ವಿಫಲರಾದರು. ಆದರೆ ಪ್ರತಿ ಬಾರಿಯು ಮುಕ್ತಿಗಾಗಿ ಕೇಳಿಕೊಳ್ಳಲಷ್ಟೇ ಶಕ್ತರಾದರು. ಕೊನೆಗೆ ಅವರು ಸರ್ವಸಂಗ ಪರಿತ್ಯಾಗ ಮಾಡಿ ರಾಮಕೃಷ್ಣರನ್ನು ಗುರುಗಳನ್ನಾಗಿ ಸ್ವೀಕಾರ ಮಾಡಿದರು. ೧೮೮೫ ರಲ್ಲಿ ರಾಮಕೃಷ್ಣರು ಕಲ್ಕತ್ತಾದ ಕೊಸ್ಸಿಪುರದಲ್ಲಿ ಇರುವ ಅವರ ತೋಟದ ಮನೆಯಲ್ಲಿ ಗಂಟಲಿನ ಹುಣ್ಣಿನಿಂದ ಬಳಲುತಿದ್ದರು.

ನರೇಂದ್ರರು ತಮ್ಮ ಆಧ್ಯಾತ್ಮಿಕ ವಿಧ್ಯಾಭ್ಯಾಸವನ್ನು ಮುಂದುವರಿಸಿದರು. ಅವರು ಕೊಸ್ಸಿಪುರದಲ್ಲಿ ನಿರ್ವಿಕಲ್ಪ ಸಮಾಧಿಯನ್ನು ಅನುಭವಿಸಿದರು. ನರೇಂದ್ರ ಮತ್ತು ರಾಮಕೃಷ್ಣರ ಇತರ ಶಿಷ್ಯರು ಗುರುಗಳ ಅದೇಶದಂತೆ ಅವರಂತೆ ನಿಲುವಂಗಿ ಮತ್ತು ಕಾವಿ ತೊಟ್ಟುಕೊಂಡರು. ಜನ ಸೇವೆಯೇ ಜನಾರ್ದನನ ಸೇವೆ ಎಂದರು. ರಾಮಕೃಷ್ಣರು ನರೇಂದ್ರರನ್ನು ತಮ್ಮ ಶಿಷ್ಯವೃಂದದ ನಾಯಕರನ್ನಾಗಿ ನೇಮಿಸಿದರು. ರಾಮಕೃಷ್ಣರು ೧೮೮೬, ಆಗಸ್ಟ ೧೬ ರಂದು ನಿಧನ ಹೊಂದಿದರು.

ರಾಮಕೃಷ್ಣ ಮಠದ ಸ್ಥಾಪನೆ

ರಾಮಕೃಷ್ಣರ ಮರಣಾ ನಂತರ ಅವರ ಮಠಕ್ಕೆ ಬರುವ ಆದಾಯವು ಕಡಿಮೆಯಾಯಿತು. ಇದರಿಂದಾಗಿ ಅವರು ಬೇರೆ ಜಾಗವನ್ನು ಹುಡುಕಬೇಕಾಯಿತು. ಬಾರನಗರದಲ್ಲಿ ನರೇಂದ್ರರು ಶಿಥಿಲವಾದ ಮನೆಯನ್ನು ಖರೀದಿಸಿ, ಆ ಮನೆಯನ್ನು ಅವರು ಮಠವನ್ನಾಗಿ ಪರಿವರ್ತಿಸಲು ಆಲೋಚಿಸಿ ದರು. ಆ ಮನೆಯ ಬಾಡಿಗೆಯನ್ನು ಭಿಕ್ಷಾಯಾಟನೆ ಮೂಲಕ ತುಂಬುತಿದ್ದರು.

ಈ ಮನೆಯೆ ರಾಮಕೃಷ್ಣರ ಮಠದ ಮೊದಲ ಶಾಖೆಯಾಯಿತು. ಅಲ್ಲಿ ನರೇಂದ್ರ ಮತ್ತು ಅವರ ಶಿಷ್ಶರು ಹೆಚ್ಚಿನ ಸಮಯವನ್ನು ಧ್ಯಾನ ಮತ್ತು ಧಾರ್ಮಿಕ ವಿಷಯಗಳನ್ನು ಅಭ್ಯಾಸ ಮಾಡುವಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದರು. ಮುಂದಿನ ಆ ದಿನಗಳನ್ನು ನೆನೆಸುತ್ತಾ "ಪ್ರತಿದಿನ ಬೆಳಿಗ್ಗೆ ೩ ರಿಂದ ರಾತ್ರಿಯವರೆಗು ನಾವು ಧ್ಯಾನದಲ್ಲೆ ಕಳೆಯುತ್ತಿದ್ದೆವು.

ಜಗತ್ತಿನ ಪರಿವೆಯೆ ಇಲ್ಲದೆ, ನಮ್ಮ ಸಾಧನಾ ಪ್ರಪಂಚದಲ್ಲಿ ಮುಳುಗಿದ್ದೆವು" ೧೮೮೧ ನೇ ಇಸವಿಯಲ್ಲಿ ನರೇಂದ್ರರು ವೈಷ್ಣವ ಚರಣ್ ಬಾಸ್ಕರವರ ಜೊತೆ ಬಂಗಾಳಿ ಭಾಷೆಯ ಕವಿತೆಗಳನ್ನೊಳಗೊಂಡ "ಸಂಗೀತ ಕಲ್ಪತರು "ಎಂಬ ಪುಸ್ತಕವನ್ನು ಸಂಗ್ರಹಿಸಿದರು. ಆದರೆ ಹಲವು ಸಮಸ್ಯೆ ಗಳಿಂದ ಅದನ್ನು ಪ್ರಕಟಿಸಲಾಗಲಿಲ್ಲ..

ವಿವೇಕಾನಂದರ ಭಾರತ ಪರ್ಯಟನೆ

೧೮೮೮ ನರೇಂದ್ರರು ಭಾರತ ಪರ್ಯಟನೆಗೆ ಹೊರಟರು. ಅವರು ಪರ್ಯಟನೆಗೆ ಹೋಗುವಾಗ ಅವರ ಜೊತೆಗೆ ಕಮಂಡಲು ದಂಡ ಮತ್ತು ಅವರಿಗೆ ಪ್ರಿಯವಾದ ಭಗವತ್ ಗೀತೆ ಹಾಗು " ದಿ ಇಮಿಟೆಶ್ನ್ ಒಫ಼್ ಕ್ರಿಸ್ತ್" ಎಂಬೆರಡು ಪುಸ್ತಕಗಳನ್ನು ತಮ್ಮ ಜೊತೆಗೆ ಒಯ್ಯುತ್ತಿದ್ದರು. ನರೇಂದ್ರರು ಸತತವಾಗಿ ಐದು ವರ್ಷಗಳ ಕಾಲ ಭಾರತವನ್ನು ಸಂಚರಿಸಿದರು.

ಉತ್ತರ ಭಾರತ

೧೮೮೮ ರಲ್ಲಿ ಗೌತಮ ಬುದ್ಹ ಮತ್ತು ಆದಿ ಶಂಕರಾಚಾರ್ಯರು ಧರ್ಮ ಪ್ರಚಾರ ಮಾಡಿದ ವಾರಣಾಸಿಗೆ ಭೇಟಿ ನೀಡಿದರು. ಅಲ್ಲಿ ಅವರು ಬಂಗಾಳಿ ಬರಹಗಾರ ಭೂದೇವ ಮುಖ್ಯೋಪಾಧ್ಯಾಯ ಮತ್ತು ಹಿಂದು ಸಂತ ತ್ರ್ಯೆಲಂಗ ರನ್ನು ಭೇಟಿ ಮಾಡಿದರು. ಭೂದೇವ ಮುಖ್ಯೋಪಾಧ್ಯಾಯ ರು " ಇಂತಹ ದೂರದೃಷ್ಟಿ ಮತ್ತು ವಿಚಾರವಾದವನ್ನು ಇಷ್ಟು ಕಿರಿಯ ಪ್ರಾಯದಲ್ಲಿ ಪಡೆದುಕೊಂಡ ನೀನು ಮುಂದೊಂದು ದಿನ ದೊಡ್ಡ ವ್ಯಕ್ತಿಯಾಗುವೆ" ಎಂದು ಪ್ರಶಂಸಿಸಿದರು. ನಂತರ ಸಂಸ್ಕ್ರತ ಮತ್ತು ವ್ಯೆದಿಕ ವಿದ್ವಾಂಸರಾದ ಬಾಬು ಪರಮದಾಸ್ ಮಿತ್ರ ಅವರನ್ನು ಭೇಟಿ ಮಾಡಿದರು. ನಂತರ ಅವರು ಅಯೋಧ್ಯಾ, ಲಕ್ನೋ ವೃಂದಾವನ ಮತ್ತು ಋಷಿಕೇಶಕ್ಕೆ ಭೇಟಿ ನೀಡಿದರು.

ಅದ್ವೈತ ಸಿದ್ಧಾಂತದ ಉಪಯುಕ್ತತೆ

ಕೇವಲ ರಾಮಕೃಷ್ಣ ಪರಮಹಂಸರ ಶಿಷ್ಯರಾಗದೆ ತಮ್ಮದೇ ಶೈಲಿಯಲ್ಲಿ ದೊಡ್ಡ ಚಿಂತಕರಾಗಿ ವಿವೇಕಾನಂದರು ಹೆಸರು ಪಡೆದಿದ್ದಾರೆ. ಅವರ ಮುಖ್ಯ ಕಾಣಿಕೆಯೆಂದರೆ ಕೇವಲ ತಾತ್ವಿಕವಾಗಿ ಉಚ್ಚ ತತ್ತ್ವಜ್ಞಾನ ಮಾತ್ರವಲ್ಲದೆ ಸಾಮಾಜಿಕ ಹಾಗೂ ರಾಜಕೀಯ ದೃಷ್ಟಿಯಿಂದಲೂ ಉಪಯುಕ್ತ ಎಂಬುದನ್ನು ತೋರಿಸಿಕೊಟ್ಟರು. ಅವರ ಅಭಿಪ್ರಾಯದಂತೆ, ರಾಮಕೃಷ್ಣರಿಂದ ಅವರು ಪಡೆದ ಮುಖ್ಯ ಬೋಧನೆಗಳಲ್ಲಿ ಒಂದೆಂದರೆ ಎಲ್ಲರಲ್ಲಿಯೂ ದೇವರಿದ್ದಾನೆ ಎಂಬುದು.

ಇದೇ ಅವರ ಮಂತ್ರವಾಯಿತು ಮತ್ತು ಅವರ "ದರಿದ್ರ ನಾರಾಯಣ ಸೇವೆ' ಎಂಬ ತತ್ತ್ವಕ್ಕೆ ದಾರಿ ಮಾಡಿ ಕೊಟ್ಟಿತು. ಈ ತತ್ತ್ವದಂತೆ ಬಡ ಜನರ ಸೇವೆಯಲ್ಲಿಯೇ ದೇವರ ಸೇವೆಯನ್ನು ಮಾಡುವ ದಾರಿಯನ್ನು ಅವರು ಪಾಲಿಸಿದರು. ಎಲ್ಲರಲ್ಲಿಯೂ ದೇವರಿದ್ದು ಎಲ್ಲರೂ ಸಮಾನರೆಂದಾದ ಮೇಲೆ ಕೆಲವರಿಗೆ ಮಾತ್ರ ಏಕೆ ಹೆಚ್ಚು ಬೆಲೆ ಬರಬೇಕು ಎಂಬ ಪ್ರಶ್ನೆಯನ್ನು ವಿವೇಕಾನಂದರು ಕೇಳಿಕೊಂಡರು.

ಅವರ ಅಂತಿಮವಾದ ತೀರ್ಮಾನವೆಂದರೆ ಭಕ್ತನು ಮೋಕ್ಷವನ್ನು ಅನುಭವಿಸಿದಾಗ ನಮ್ಮಲ್ಲಿರುವ ಎಲ್ಲ ಭೇದಗಳೂ ಮಾಯವಾಗಿ, ಉಳಿಯುವುದೆಂದರೆ ಬ್ರಹ್ಮನೊಂದಿಗೆ ತಮ್ಮ ಐಕ್ಯವನ್ನು ಅರಿಯದ ಮತ್ತು ಕೆಳತುಳಿಯ ಲ್ಪಟ್ಟಿರುವ ಜನರ ಬಗೆಗೆ ಸಂತಾಪ ಮತ್ತು ಅವರಿಗೆ ಸಹಾಯ ಮಾಡುವ ಸದೃಢ ನಿಶ್ಚಯ.

ವಿವೇಕಾನಂದರ ವಿಶ್ವಪರ್ಯಟನೆ



ವಿವೇಕಾನಂದರು ಭಾರತದ ತತ್ವಜ್ಞಾನ, ಯೋಗ, ವೇದಾಂತ ಇವೆಲ್ಲವನ್ನು ಪಾಶ್ಚಿಮಾತ್ಯದೇಶಗಳಲ್ಲಿ ಪ್ರಚಾರ ಮಾಡಿದರು. ಅವರು ತಮ್ಮ ಗುರುಗಳ ಒಳ್ಳಯ ಮನೋಭಾವದ ಕಡೆಗೆ ವಾಲಿದರು. ಅವರು ಸನ್ಯಾಸಿಯಾಗಿ ದೇವರಸೇವೆ ಹೇಗೆ ಮಾಡ ಬಹುದಂದು ನಿರೂಪಿಸಿದರು. ಗುರು ರಾಮಕೃಷ್ಣರ ಮರಣಾ ನಂತರ ವಿವೇಕಾನಂದರು ಭಾರತ ಪ್ರವಾಸ ಕೈಗೊಂಡರು.

ಭಾರತದ ಉಪಖಂಡದಲ್ಲಿ ಬ್ರಿಟೀಷರ ಷರತ್ತುಗಳನ್ನು ಆಧ್ಯಯನ ಮಾಡಿದರು. ನಂತರ ಆವರು ಅಮೇರಿಕಾ ಪ್ರವಾಸ ಕೈಗೊಂಡರು. ೧೮೯೩ರಲ್ಲಿ ಚಿಕಾಗೋದಲ್ಲಿ ನಡೆದ ಸಮ್ಮೇಳನದಲ್ಲಿ ಭಾರತೀಯರ ಧಾರ್ಮಿಕತೆಯನ್ನು ಎತ್ತಿ ಹಿಡಿದರು. ವಿವೇಕಾನಂದರು ನೂರಕ್ಕು ಹೆಚ್ಚು ಖಾಸಗಿ ಹಿಂದೂಸಂಸಂಸ್ಥೆಗಳಲ್ಲಿ ತಮ್ಮ ವಿಚಾರಧಾರೆಯನ್ನು ಹರಿಸಿದರು. ದೇಶ ವಿದೇಶಗಳಲ್ಲಿ ಹಿಂದುಧರ್ಮದ ತತ್ವವನ್ನು ಭೋಧಿಸಿದರು.

ಅವರು ಪ್ರಪಂಚದಾದ್ಯಂತ ಪ್ರಯಾಣ ಮಾಡಿ, ಅಲ್ಲಿನ ಭಕ್ತರನ್ನುದ್ದೇಶಿಸಿ ಮಾಡಿದ ಭಾಷಣಗಳನ್ನು ಒಟ್ಟುಗೂಡಿಸಿ ಬರೆಯಲ್ಪಟ್ಟ ಅವರ ನಾಲ್ಕು ಪುಸ್ತಕಗಳು ಹಿಂದೂ ಧರ್ಮದ ಯೋಗ ಸಿದ್ಧಾಂತವನ್ನು ತಿಳಿಯ ಬಯಸುವವರಿಗೆ, ಮೂಲಭೂತ ಪಠ್ಯಗಳೆಂದೇ ಪರಿಗಣಿತವಾಗಿವೆ. *ವಿವೇಕಾನಂದರ ನಂಬಿಕೆಗಳಲ್ಲಿ ಮುಖ್ಯವಾದುದು ನಮ್ಮಲ್ಲಿ ಎಲ್ಲರೂ ಮುಕ್ತರಾಗುವವರೆಗೆ ಯಾರೊಬ್ಬರೂ ಮುಕ್ತರಾಗಲಾರರೆಂಬುದು.

ವೈಯಕ್ತಿಕ ಮುಕ್ತಿಯ ಆಸೆಯನ್ನು ಬಿಟ್ಟು ಎಲ್ಲರ ಮುಕ್ತಿಗಾಗಿ ಶ್ರಮಿಸುವವನೇ ಅವರ ದೃಷ್ಟಿಯಲ್ಲಿ ಪ್ರಬುದ್ಧ ವ್ಯಕ್ತಿ. ವಿವೇಕಾನಂದರು, ಧರ್ಮ ಮತ್ತು ಸರ್ಕಾರ ದ ನಡುವೆ ಕಟ್ಟುನಿಟ್ಟಾದ ದೂರವಿಡುವಂತೆ ಮನವಿ ಮಾಡಿದರು. ಸಾಮಾಜಿಕ ಕಟ್ಟಲೆಗಳು ಧರ್ಮದ ಮೂಲಕ ರೂಪುಗೊಂಡಿರುತ್ತವೆಯಾದರೂ, ಸರ್ಕಾರಿ ಕೆಲಸಗಳಲ್ಲಿ ಯಾವುದೇ ಒಂದು ಧರ್ಮಕ್ಕೆ ಪ್ರಾಶಸ್ತ್ಯವಿರಬಾರದು ಎಂದು ಅವರ ನಂಬಿಕೆಯಾಗಿತ್ತು.

ಅವರ ಕಲ್ಪನೆಯ ಆದರ್ಶ ಸಮಾಜವೆಂದರೆ ಬ್ರಾಹ್ಮಣ ಜ್ಞಾನ, ಕ್ಷತ್ರಿಯ ಸಂಸ್ಕೃತಿ, ವೈಶ್ಯ ದಕ್ಷತೆ ಮತ್ತು ಶೂದ್ರರ ಸಮಾನತೆಯ ಮೇಲೆ ನಿಂತಿರುವಂಥ ಸಮಾಜ. ಯಾವುದೇ ಒಂದು ವರ್ಗದ ಪ್ರಾಶಸ್ತ್ಯ ಸಮಾಜದಲ್ಲಿ ಸಮಾನತೆಯನ್ನು ಹಾಳುಗೆಡವುತ್ತದೆ ಎಂಬುದು ಅವರ ಸಾಮಾಜಿಕ ದೃಷ್ಟಿ. ಆಳವಾಗಿ ಸಮಾಜವಾದಿಯಾಗಿದ್ದರೂ, ಧರ್ಮದ ಮೂಲಕ ಸಮಾಜವಾದವನ್ನು ಹೇರುವುದು ತಪ್ಪೆಂದೂ, ಸಮಾಜವಾದ ಎಂಬುದು ವೈಯಕ್ತಿಕವಾಗಿ ಸಂದರ್ಭ ಸರಿಯಿದ್ದಾಗ ಜನರು ಕೈಗೊಳ್ಳಬೇಕಾದ ನಿರ್ಧಾರವೆಂದೂ ಅವರ ದೃಷ್ಟಿ.

ಸರ್ವಧರ್ಮಸಮ್ಮೇಳನದಲ್ಲಿ ಮಾಡಿದ ಭಾಷಣ

ಸರ್ವಧರ್ಮಸಮ್ಮೇಳನ, ದ ಭಾಷಣದಲ್ಲಿ ಪ್ರತಿಪಾದಿಸಿದ ಹಿಂದೂ ಧರ್ಮದ ಸಿದ್ಧಾಂತಗಳು, ಮಿಂಚಿನಂತೆ ಅಲ್ಲಿನ ಜನರನ್ನು ಆಕರ್ಶಿಸಿದವು. ವಿವೇಕಾನಂದರ ಅತಿ ಪ್ರಸಿದ್ಧ ಯಶಸ್ಸು೧೮೯೩ ರಲ್ಲಿ ಶಿಕಾಗೊ ನಗರದಲ್ಲಿ ನಡೆದ ಪ್ರಪಂಚ ಮತಗಳ ಸಂಸತ್ತಿನಲ್ಲಿ ಬಂದಿತು. ಅವರ ಭಾಷಣದಲ್ಲಿ ಮೊದಲ ವಾಕ್ಯವಾಗಿದ್ದ "ಅಮೆರಿಕದ ಸಹೋದರ ಸಹೋದರಿಯರೇ" ಎಂಬ ವಾಕ್ಯ ಚಿರಸ್ಮರಣೀಯವಾಗಿದೆ.



ಈ ಸಂದರ್ಭದಲ್ಲಿಯೇ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹಿಂದೂ ಧರ್ಮದ ಬಗೆಗೆ ಆಸಕ್ತಿಯನ್ನೂ ಕೆರಳಿಸಿದರು. 'ಪೂರ್ವ ದೇಶದ ವಿಚಿತ್ರ ಧರ್ಮ' ಎಂದು ಪರಿಗಣಿತವಾಗಿದ್ದ ಹಿಂದೂ ಧರ್ಮದ ತಾತ್ವಿಕ ಹಾಗೂ ಧಾರ್ಮಿಕ ಮೂಲಭೂತ ಮಹತ್ವವುಳ್ಳ ಸಂಪ್ರದಾಯಗಳು, ಪಾಶ್ಚಾತ್ಯ ರಾಷ್ಟ್ರಗಳಲ್ಲಿಯೂ ಗುರುತಿಸಲ್ಪಟ್ಟವು. ಈ ಸಂದರ್ಭದ ಕೆಲವೇ ವರ್ಷಗಳಲ್ಲಿ 'ನ್ಯೂಯಾರ್ಕ್' ಮತ್ತು 'ಲಂಡನ್' ನಗರಗಳಲ್ಲಿ ವೇದಾಂತ ಕೇಂದ್ರಗಳನ್ನು ಸ್ಥಾಪಿಸಿ ಅನೇಕ ವಿಶ್ವವಿದ್ಯಾಲಯಗಳಲ್ಲಿ ಭಾಷಣಗಳನ್ನು ಮಾಡಿದರು.

ಇದರ ನಂತರ ಭಾರತಕ್ಕೆ ಮರಳಿ ರಾಮಕೃಷ್ಣ ಮಿಷನ್ ಅನ್ನು ಸ್ಥಾಪಿಸಿದರು. ಹಾಗೆಯೇ "ಆತ್ಮನೋ ಮೋಕ್ಷಾರ್ಥಂ ಜಗದ್ ಹಿತಾಯ ಚ" (ಸ್ವತಃ ಮೋಕ್ಷಕ್ಕಾಗಿ ಮತ್ತು ಜಗತ್ತಿನ ಹಿತಕ್ಕಾಗಿ) ಎಂಬ ತತ್ತ್ವವನ್ನೂ ಸ್ಥಾಪಿಸಿದರು. ಇದು ಈಗ ಭಾರತದ ಧಾರ್ಮಿಕ ಸಂಸ್ಥೆಗಳಲ್ಲಿ ಬಹಳ ಹೆಸರು ಮಾಡಿರುವ ಮತ್ತು ಗೌರವಿತ ಸಂಸ್ಥೆಯಾಗಿದೆ.

'ಸ್ವಾಮಿ ವಿವೇಕಾನಂದ'ರು ದಿವಂಗತರಾದಾಗ ಕೇವಲ ೩೯ ವರ್ಷದವರಾಗಿದ್ದರು. ಯವಕರಿಗೆ ದಾರಿ ದೀಪವಾಗಿದ್ದರು. ಸ್ವಾಮಿ ಅವರ ಭಾಷಣದ ಆಯ್ದ ಭಾಗ ಹೀಗಿದೆ:-"ನಾನು ಮಾಡಿರುವ ಅಲ್ಪ ಕಾರ್ಯ ಕೇವಲ ನನ್ನಲ್ಲಿರುವ ಶಕ್ತಿಯಿಂದಲ್ಲ. ನನ್ನ ಪರಮಮಿತ್ರ ಪ್ರಿಯತಮ ಮಾತೃಭೂಮಿಯಿಂದ ಹೊರಟ ಉತೇಜನ ಶುಭಾಶಯ ಆಶೀರ್ವಾದಗಳು".



ಸ್ವದೇಶ ಮಂತ್ರ

ಆರ್ಯಮಾತೆಯ ಅಮೃತಪುತ್ರರಿರಾ, ಮರೆಯದಿರಿ, ನಿಮ್ಮ ಸ್ತ್ರೀಯರ ಆದರ್ಶ ಸೀತಾ, ಸಾವಿತ್ರಿ, ದಮಯಂತಿಯರು. ಮರೆಯದಿರಿ, ನೀವು ಪೂಜಿಸುವ ಜಗದೀಶ್ವರನು ತ್ಯಾಗಿಕುಲ ಚೂಡಾಮಣಿ, ಉಮಾವಲ್ಲಭ ಶಂಕರ. ಮರೆಯದಿರಿ, ನಿಮ್ಮ ವಿವಾಹ, ನಿಮ್ಮ ಐಶ್ವರ್ಯ, ನಿಮ್ಮ ಜೀವನ ಬರಿಯ ಇಂದ್ರಿಯ ಭೋಗಕ್ಕಲ್ಲ, ವ್ಯಕ್ತಿಗತ ಸುಖಕ್ಕಲ್ಲ. ಮರೆಯದಿರಿ, ನಿಮ್ಮ ಜನ್ಮವಿರುವುದೇ ಜಗನ್ಮಾತೆಯ ಅಡಿದಾವರೆಗಳಲ್ಲಿ ಬಲಿದಾನಕ್ಕಾಗಿ!

ಮರೆಯದಿರಿ, ನಿಮ್ಮ ಸಾಮಾಜಿಕ ರಚನೆ ಅನಂತ ವಿಶ್ವವ್ಯಾಪಿ ಜಗಜ್ಜನನಿಯ ಕಾಂತಿಯನ್ನು ಪ್ರತಿಬಿಂಬಿಸುವುದಕ್ಕಾಗಿ ಇರುವುದು. *ಮರೆಯದಿರಿ, ಅಂತ್ಯಜರು, ಮೂಢರು, ದರಿದ್ರರು, ನಿರಕ್ಷರಕುಕ್ಷಿಗಳು, ಚಂಡಾಲರು ಮತ್ತು ಚಮ್ಮಾರರು - ಎಲ್ಲರೂ ನಿಮ್ಮ ರಕ್ತಬಂಧುಗಳಾದ ಸಹೋದರರು ! ವೀರಾತ್ಮರೇ, ಧೀರರಾಗಿ, ನೆಚ್ಚುಗೆಡದಿರಿ. ಭಾರತೀಯರು ನಾವು ಎಂದು ಹೆಮ್ಮೆ ತಾಳಿ. ಸಾರಿ ಹೇಳಿ, ಭಾರತೀಯರು ನಾವು, ಭಾರತೀಯರೆಲ್ಲ ನಮ್ಮ ಸಹೋದರರು.

ಸಾರಿ ಹೇಳಿ, ಮೂರ್ಖ ಭಾರತೀಯರೂ ನಮ್ಮ ಸಹೋದರರು, ಬ್ರಾಹ್ಮಣ ಭಾರತೀಯರೆಮ್ಮ ಸಹೋದರರು, ಪಂಚಮ ಭಾರತೀಯರೆಮ್ಮ ಸಹೋದರರು. ನೀವು ಒಂದು ಚಿಂದಿಬಟ್ಟೆಯನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದರೂ ಕೂಡ, ಅಭಿಮಾನಪೂರ್ವಕವಾಗಿ ದಿಕ್‌ತಟಗಳು ಅನುರಣಿತವಾಗುವಂತೆ ತಾರಸ್ವರದಿಂದ ಸಾರಿ ಹೇಳಿ "ಭಾರತೀಯರು ನಮ್ಮ ಸಹೋದರರು, ಭಾರತೀಯರು ನಮ್ಮ ಪ್ರಾಣ. ಭಾರತೀಯ ದೇವ ದೇವತೆಗಳೆಲ್ಲರೂ ನಮ್ಮ ದೇವರು. ಭಾರತೀಯ ಸಮಾಜ, ನಮ್ಮ ಬಾಲ್ಯದ ತೊಟ್ಟಿಲು, ತಾರುಣ್ಯದ ನಂದನವನ, ವೃದ್ಧಪ್ಯದ ವಾರಾಣಸಿ". ಸಹೋದರರೆ, ಹೀಗೆ ಸಾರಿ "ಭಾರತ ಭೂಮಿಯೆ ನಮ್ಮ ಪರಂಧಾಮ. ಭಾರತದ ಶುಭವೆ ನಮ್ಮ ಶುಭ." ಹಗಲೂ ರಾತ್ರಿಯೂ ಇದು ನಿಮ್ಮ ಪ್ರಾರ್ಥನೆಯಾಗಲಿ, "ಹೇ ಗೌರೀನಾಥ, ಹೇ ಜಗನ್ಮಾತೆ, ಪೌರುಷವನ್ನು ಎಮಗೆ ದಯಪಾಲಿಸು. ಹೇ ಸರ್ವಶಕ್ತಿಶಾಲಿನಿ, ನಮ್ಮ ದೌರ್ಬಲ್ಯವನ್ನು ದಹಿಸು. ಕ್ಲೈಬ್ಯವನ್ನು ಹೋಗಲಾಡಿಸು. ನಮ್ಮ ಷಂಡತನವನ್ನು ಹೋಗಲಾಡಿಸಿ, ನಮ್ಮಲ್ಲಿ ವೀರತ್ವವನ್ನು ತುಂಬು.









ಸ್ವಾಮಿ ವಿವೇಕಾನಂದರ ನುಡಿಮುತ್ತುಗಳು



ಕರ್ಮ, ಭಕ್ತಿ ಹಾಗೂ ಯೋಗ ಇವುಗಳ ಸಮನ್ವಯದಿಂದ ಪರಮಾತ್ಮನ ದರ್ಶನ ಲಭ್ಯವಾಗುತ್ತದೆ.

ನೀವು ಕೆಲಸಕ್ಕೆ ಬಾರದವರೆಂದು ತಿಳಿದುಕೊಳ್ಳಬೇಡಿ. ಭಗವಂತನ ಮಕ್ಕಳು ನೀವು. ಮಹಾಶಕ್ತಿ ನಮ್ಮ ಹಿಂದೆ ಇದೆ. ಅದನ್ನು ಹೇಗೆ ಉಪಯೋಗಿಸಬೇಕು ಎಂಬುದನ್ನು ಅರಿಯಬೇಕು.

ಕೆಲಸ ಯಾವುದು ಮೇಲಲ್ಲ, ಕೀಳಲ್ಲ ಎಲ್ಲಾ ಕೆಲಸವೂ ಒಂದು ಪ್ರಾರ್ಥನೆ, ಪೂಜೆಯಂತೆ.

ನೀವು ಪರಿಶುದ್ಧರಾಗಿ, ಸಹಾಯವನ್ನು ಕೋರಿ ನಿಮ್ಮ ಬಳಿಗೆ ಬಂದವರಿಗೆ ಸಾಧ್ಯವಾದ ಸಹಾಯ ಮಾಡಿ. ಇದು ಪುಣ್ಯ, ಕರ್ಮ. ಇದರಿಂದ ಚಿತ್ತ ಶುದ್ಧಿಯಾಗುವುದು, ಸರ್ವರಲ್ಲಿ ನೆಲೆಸಿರುವ ಭಗವಂತ ವ್ಯಕ್ತನಾಗುವನು.

ಒಂದು ಭಾವನೆಯನ್ನು ತೆಗೆದುಕೊಳ್ಳಿ. ಅದನ್ನು ನಿಮ್ಮ ಜೀವನದಲ್ಲಿ ಅಭ್ಯಾಸ ಮಾಡಿ, ಅದನ್ನೇ ಆಲೋಚನೆ ಮಾಡಿ, ಅದನ್ನೇ ಕನಸು ಕಾಣಿ. ಆ ಒಂದು ಭಾವನೆಯಿಂದ ತುಂಬಿ ತುಳುಕಾಡಲಿ.

ಉಳಿದ ಆಲೋಚನೆಗಳನ್ನೆಲ್ಲ ಅವುಗಳ ಪಾಡಿಗೆ ಬಿಡಿ. ಜಯ ಪಡೆಯುವುದಕ್ಕೆ ಇದೊಂದೇ ದಾರಿ.

ನನ್ನನ್ನು ನೀನು ಅಸಹಾಯಕನೆಂದು ಭಾವಿಸುವುದು ಬಹಳ ದೊಡ್ದ ತಪ್ಪು. ಇತರರ ನೆರವನ್ನು ನಿರೀಕ್ಷಿಸಲೇಬಾರದು. ನಮಗೆ ನಾವೇ ಸಹಾಯ ಮಾಡಿಕೊಳ್ಳದಿದ್ದರೆ ನಮಗೆ ಬೇರೆ ಯಾರ ಸಹಾಯವೂ ಬಾರದು.

ಇನ್ನು ಕೇಲವು ಓದಲು ಇದರ ಕೇಳಗಡೆ ನೋಡಿ ಕ್ಲಿಕ್ ಮಾಡಿ