![]() |
ಮರ, ಗಿಡ,ಗಳು
ಮರಗಿಡಗಳು
ಮರದಿಂದ ಮನುಷ್ಯ ಬದುಕಿದ್ದಾನೆ
ಹೋರತು
ಮನುಷ್ಯನಿಂದ ಮರಗಳು
ಬದುಕಿಲ್ಲ
ನಾವು ಮರ ಕಡೆಯುತ್ತೆವೆ ಆದರೆ ಅದಕ್ಕೆ ಕಾರಣ ಏನೆಂದರೆ.ನಮ್ಮ ಮನೆಗೆ ಬೇಕಾದ ಗ್ರಹ ಉಪಯೋಗ ವಸ್ತುಗಳು,ಮತ್ತೆ ಒಲೆ ಉರುವಲು ಇನ್ನು ಹಲವಾರ ಕಾರಣಕ್ಕಾಗಿ ಬಳಸುತ್ತೆವೆ ಮುಖ್ಯವಾಗಿ ಜನರಿ ಬೇಕಾದ ಓಡಾಡುವ ಸ್ಥಳಕ್ಕಾಗಿ ರಸ್ತೆ ಸಾರಿಗೆಯನ್ನಾಗಿ ಮಾಡಿಕೋಳ್ಳತ್ತಾರೆ.ಮತ್ತೆ ದುಡ್ಡು ಬರುತ್ತೆ ಅಂದ್ರೆ ಅವರ ಸುತ್ತಮುತ್ತಲಿರುವ ಜಾಗದಲ್ಲಿ ಬೇಳೆದಿರು ಮರ ಗಿಡಗಳನ್ನೆ ಕಡಿದು ನಾಶಮಾಡಿ ಅಲ್ಲಿ ಒಂದು ಸೈಟ್ ಜಾಗ ಅಂತ ಹೇಳಿ ಮಾರಾಟಮಾಡಿ ಮನೆ ಕಟ್ಟುತ್ತಾರೆ.ಎಷ್ಟು ಬುಧ್ದಿವಂತರು ಅಲ್ವಾ ನಾವೆಲ್ಲ. ಸೂಪರ್ ದಿನಾಲು ಒಬ್ಬ ಮನುಷ್ಯ ಒಂದು ದಿವಸಕ್ಕೆ 10ಮರಗಳನ್ನು ಕಡಿದರೆ ನಮ್ಮ ನಾಡು ಹಚ್ಚ ಹಸಿರಿನಿಂದ ಚಿಲಿಪಿಲಿ ಹಕ್ಕಿಗಳ ಸದ್ದು ಉಸಿರಾಡಲು ಗಾಳಿ ಎಲ್ಲ ಬರುತ್ತಲ್ಲವ. ಥೂ ಇ ಮಾನವ ಜನ್ಮನೆ ಇಷ್ಟೆ ನಾಶ ಮಾಡೊದ್ರಲ್ಲೆ ಹೊಯಿತು ಅವನ ಜೀವನ ತನ್ನ ಸ್ವಾರ್ಥಕ್ಕಾಗಿ ಇವಾಗ ಗಿಡಮರಗಳನ್ನು ಕಡಿದು ನಾಶ ಮಾಡಿ ಮುಂದಿನ ಪಿಳಿಗೆಗೆ ಏನು ಇಲ್ಲಾದಹಾಗೆ ಮಾಡುತ್ತಿದ್ದಾನೆ.ಅಲ್ಲ ನಾಶ ಮಾಡೊಕೆನೆ 3ತಿಂಗಳು ಬೇಕಾದರೆ ಬೇಳೆಸಲು ಅವನು ಸತ್ತರು ಕೂಡ ಬೇಳೆಸೊಕಾಗಲ್ಲ. ತನ್ನ ಕುಟುಂಬಕ್ಕೆ ಯಾವನೆ ಧಕ್ಕೆ ತಂದರೆ ಅವನನ್ನೆ ಬೀಡುವುದಿಲ್ಲ ಆದರೆ ಮರಗಿಡ ಕಡಿಬೇಕಾದರೆ ಯಾರಿಗು ಕೇಳೊದಿಲ್ಲ ಪಾಪ ಆ ಹಸಿರು ಸಸ್ಯ ಅವನಿಗೆನು ಮಾಡಿತು ಮಾನವ ಮರಗಳನ್ನು ನಾಶ ಮಾಡುತ್ತಿದ್ದರೆ ಅವನ ಉಸಿರು ಜೀವ ನಿಲ್ಲಲು ತನ್ನ ಪ್ರಾಣವನ್ನೆ ಪಣತೊಟ್ಟುನಿಂತ ಮರಗಳಿಗೆ ನೀಜವಾಗಲು ಹೇಳಬೇಕೆಂದರೆ ಕಾಡಲ್ಲಿರುವ ಪ್ರಾಣಿಗಳಿಗಿಂತ ಕೆಟ್ಟ ಕ್ರೂರ ಪ್ರಾಣಿ ಎಂದರೆ ಒಂದೆ ಒಂದು ಪ್ರಾಣಿ ಅದು ಮನುಷ್ಯ ಜಾತಿ ಪ್ರಾಣಿ.
* ಇದನ್ನು ನಾವು ಕಡಿಮೆ ಮಾಡಬೇಕು ಅಂದರೆ
1}ಮೋದಲಿಗೆ ತಮ್ಮ ಕೈಯಿಂದ ಮರ ಬೇಳೆಸಲು ಆಗದಿದ್ದರು ಪರವಾಗಿಲ್ಲ ಬೇಳೆದು ನಿಂತ ಮರಕ್ಕೆ ಆಶ್ರಯ ಕೋಟ್ಟ ಕಾಪಾಡಿ.
2}ಮನೆಲಿ ಎಷ್ಟು ಜನ ಸಧಸ್ಯರು ಇರುವರೊ ಅದರ ಎರಡು ಪಟ್ಟು ಬೇಳೆಸಲು ಆಗದಿದ್ದರು ಒಬ್ಬ ವ್ಯಕ್ತಿಗೆ ಒಂದು ಮರ ಅಂದುಕೊಂಡು ಬೇಳೆಸಿ.
3}ಒಂದು ಸಸಿ ನಮಗೆ ರೋಡಲ್ಲಿ ಬೇಳೆಯಿವುದನನ್ನು ಕಂಡರೆ ಅದನ್ನು ನೋಡಿ ಸುಮ್ಮನೆ ಹೋಗದಿರಿ ಮಾನವಿಯತೆಯಿಂದ ಅದಕ್ಕೆ ಕಾವಾಲಾಗಿ ನಿಂತ್ತು ಅದಕ್ಕೆನು ಬೇಕು ಅಷ್ಟು ಅದಕ್ಕೆ ನಿಡಿದರೆ ಸಾಕು.
4}ಬೀದಿಗೆ ಅಂದರೆ ನಿಮ್ಮ ಮನೆಗೆ ಹೋಗುವಾ ದಾರಿಯಲ್ಲಿ ನಿವು ನಿಮ್ಮ ಮನೆ ತಲುಪವರೆಗು ಮರಗಳೆ ಕಾಣಿಸಬೇಕು ಅಷ್ಟು ಚೇನ್ನಾಗಿ ಬೇಳೆಸಬೇಕು.
5}ಮರಗಳನ್ನ ನೊಡಿದರೆ ಮತ್ತೊಬ್ಬರಿಗು ಕಣ್ಣಲ್ಲಿ ಚುಚ್ಚುತಾ ಇರಬೇಕು,ಹೊಟ್ಟೆ ನೊವು ಬರಬೇಕು.
* ಮರದಿಂದ ಉಪಯೋಗವೇನು?
1}ನಾವು ಬದುಕಲು ಗಾಳಿಬೇಕು ಮುಖ್ಯವಾಗಿ ಅಲ್ಲವ. ಗಾಳಿ ಸಿಗುತ್ತೆ.
2}ಮತ್ತೆ ಹಣ್ಣಿನ ಮರಗಳನ್ನು ಬೇಳೆಸಿದರೆ ನಮಗೆ ಬೇಕಾಗುವ ಪ್ರೊಟಿನ್ಅಂಶದ ಹಣ್ಣಗಳು ತಿನ್ನಬಹುದು.
3}ವಾಯು ಮಾಲಿನ್ಯ ತಡೆಗಟ್ಟಿ ನಮಗೆ ಬರುವ ಕೆಟ್ಟ ರೋಗಗಳಿಂದ ದೂರವಿಡುತ್ತದೆ.
4}ಸರಿಯಾದ ಹೋತ್ತಿಗೆ ಮಳೆ ಬರುತ್ತೆ.ಬೇಳೆ ಬೇಳೆಯುತ್ತವೆ.
5}ಆ ಹಚ್ಚ ಹಸಿರಿನ ವಾತಾವರಣವನ್ನು ನೋಡಿದರೆ ಮನುಷ್ಯನಿಗೆ ಆನಂದಿಂದ ತನಗೆ ಬಂದ ಕೆಟ್ಟ ಚಿಂತ್ತೆಗಳನ್ನು ಮರದ ಕೇಳಗಡೆ ಮಲಗಿದರೆ ಮರೆತು ಬಿಡುತ್ತಾನೆ. ಅಷ್ಟ ಶಕ್ತಿ ಇದೆ ಮರಗಳಲ್ಲಿ.
ಭಗತ್ ಸಿಂಗ್
ಭಗತ್ ಸಿಂಗ್
ಭಗತ್ ಸಿಂಗ್(೧೯೦೭–೧೯೩೧) ಭಾರತ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ
ಮತ್ತು
ಲ್ಲೂಕಿನ ಬಂಗಾ ಎಂಬ ಹಳ್ಳಿಯಲ್ಲಿ. ಅವರ ತಾಯಿ
ಶ್ರೀಮತಿ ವಿದ್ಯಾವತಿ ಮತ್ತು ಜೀವ ವಿಮಾ ಕಂಪನಿಯಲ್ಲಿ ಏಜೆಂಟರಾಗಿ ವೃತ್ತಿ ಮಾಡುತ್ತಿದ್ದ ತಂದೆ
ಕಿಶನ್ ಸಿಂಗ್. ಭಗತ್ ಮೇಲೆ ಅತೀವ ಪ್ರಭಾವವನ್ನು ಬೀರಿದ್ದವರೆಂದರೆ ಅವರ ಚಿಕ್ಕಪ್ಪ ಅಜಿತ್
ಸಿಂಗ್. ಈಗಾಗಲೇ ಅಜಿತ್ ಸಿಂಗರು ಉಗ್ರ ಭಾಷಣಕಾರರಾಗಿದ್ದು
ರೈತರ ನಡುವೆ ಹಲವಾರು ಚಳುವಳಿಗಳನ್ನು ಸಂಘಟಿಸಿ ಬ್ರಿಟೀಷರು ಬಂಧನಕ್ಕೀಡು ಮಾಡಲು ಬಲೆ
ನೇಯ್ದಿದ್ದರೂ ಸಿಗದೆ ಅವರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದರು. ಇದರೊಂದಿಗೆ ಜಲಿಯನ್
ವಾಲಾಬಾಗ್ನಲ್ಲಿ ಬ್ರಿಟೀಷರು ನಡೆಸಿದ ಮಾರಣಹೋಮದಿಂದುಂಟಾದ ರಕ್ತದ ಕೆಂಪು ಕಲೆ ಅವರಲ್ಲಿ
ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹಬ್ಬಿಸಿ ಮನಸ್ಸಿನಲ್ಲಿ ಹೋರಾಟದ ಚಿತ್ತಾರ ಮೂಡಿಸಿತ್ತು. ಪಂಜಾಬಿನ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ
ನಿರತರಾಗಿದ್ದು, ಲಾಹೋರ್ ಪಿತೂರಿ
ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಕರ್ತಾರ್ ಸಿಂಗ್ ಸರಭ್ ರವರನ್ನು 1915 ರಲ್ಲಿ ಅವರ 20 ನೇ ವಯಸ್ಸಿನಲ್ಲೇ ನೇಣಿಗೇರಿಸಲಾಗಿತ್ತು.
"ರಾಷ್ಟ್ರ ವಿಮೋಚನೆಯೊಂದೇ ನನ್ನ ಗುರಿ. ಯಾವುದೇ ವ್ಯಕ್ತಿ, ರಾಷ್ಟ್ರ, ಧರ್ಮ ಅಥವಾ ಜನಾಂಗದ ಮೇಲೆ ದ್ವೇಷ ಸಾಧಿಸಲು
ನಾನಾವುದನ್ನೂ ಮಾಡಿಲ್ಲ. ನನಗೆ ಬೇಕಾಗಿರುವುದೊಂದೆ - ಸ್ವಾತಂತ್ರ್ಯ. ಅದೊಂದೇ ನನ್ನ ಕನಸು"
ಎಂ ಸರಭ್ರ ಕೊನೆಗಾಲದ ಮಾತುಗಳು ಅವರಲ್ಲಿ ಕ್ರಾಂತಿಯ ಉದ್ದೀಪನ ಹಚ್ಚಿದ್ದವು. ಇದು ಭಗತ್ರನ್ನು
ಮೈನವಿರೇಳಿಸಿ ಸಾವಿಗೇ ಸವಾಲು ಹಾಕುವ ಗುಣವನ್ನು ಮೈಗೂಡುವಂತೆ ಮಾಡಿತ್ತು.
ಹಿಂದೂಸ್ತಾನ್
ಗಣತಂತ್ರ ಸಂಘಟನೆ:
ವಿದ್ಯಾರ್ಥಿ ಜೀವನದಲ್ಲಿ ಅವರು 1921 ರ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದ್ದರು.
ರಾಷ್ಟ್ರೀಯ ಭಾವನೆಗಳನ್ನು ಪ್ರಚೋದಿಸುತ್ತಿದ್ದರಿಂದ ಬ್ರಿಟೀಷರು ನಿಷೇಧಿಸಿದ್ದ ರಾಷ್ಟ್ರೀಯ ನಾಟಕ
ಕೂಟದ ಸಕ್ರಿಯ ಕಾರ್ಯಕರ್ತನಾಗಿದ್ದುಕೊಂಡೇ ತಾನೂ ಸಹ ಹಲವಾರು ಪಾತ್ರಗಳನ್ನು
ನಿರ್ವಹಿಸುತ್ತಿದ್ದರು. ಮನೆಯಲ್ಲಿ ಮದುವೆ ಒತ್ತಾಯ ಹೆಚ್ಚಾದಾಗ ಮನೆ ಬಿಟ್ಟು ವಿಧ್ಯಾಭ್ಯಾಸ
ತೊರೆದು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಳ್ಳಲು 1924 ರಲ್ಲಿ ಕಾನ್ಪುರಕ್ಕೆ ತೆರೆಳಿದರು. ಕಾನ್ಪುರದಲ್ಲಿ ಚಂದ್ರಶೇಖರ್ ಆಜಾದ್, ಬಿ.ಕೆ. ದತ್, ಜೆ.ಸಿ.ಚಟರ್ಜಿ, ಬಿಜೊಯ್ ಕುಮಾರ್ ಸಿನ್ಹಾ ರಂಥಹ ಕಾರ್ಯಕಾರಿಗಳ ಸಂಪರ್ಕ
ಪಡೆದರು. ಈ ಸಮ್ಮಿಲನ ಗಾಳಿ ಮತ್ತು ಬೆಂಕಿ ಒಂದೂಗೂಡಿದಂತಾಗಿ ಸಮರ ಶೀಲ ಹೋರಾಟ ನಡೆಸಲು ಭದ್ರವಾದ
ಬುನಾದಿ ಹಾಕಿದವು. ಆ ಸಂದರ್ಭದಲ್ಲಿ ಕ್ರಾಂತಿಕಾರಿ ಸಂಘಟನೆಯೆಂಬ ಹೆಗ್ಗಳಿಕೆಯಿಂದ ಕೆಲಸ
ಮಾಡುತ್ತಿದ್ದ ಹಿಂದೂಸ್ತಾನ್ ಗಣತಂತ್ರವಾದಿ ಸಂಘಟನೆಯ ಚಟುವಟಿಕೆಗಳನ್ನು ಹತ್ತಿರದಿಂದ
ಗಮನಿಸುತ್ತಿದ್ದರು. ವಸಾಹತುಶಾಹಿ ಪ್ರಭುತ್ವವನ್ನು ಶಸ್ತ್ರಸಜ್ಜಿತ
ಕ್ರಾಂತಿಯ ಮೂಲಕ ಕಿತ್ತೊಗೆಯಲು ಸಚಿಂದ್ರ ನಾಥ ಸನ್ಯಾಲ್, ಜೋಗೇಶ್ ಚಂದ್ರ ಚಟರ್ಜಿ ಮತ್ತು ರಾಮಪ್ರಸಾದ್
ಬಿಸ್ಮಿಲ್ರವರ ನಾಯಕತ್ವದಡಿ 1924 ರ ಅಕ್ಟೋಬರ್
ನಲ್ಲಿ ಹಿಂದೂಸ್ತಾನ್ ಗಣತಂತ್ರ ಸಂಘಟನೆಯನ್ನು ಸ್ಥಾಪಿಸಲಾಗಿತ್ತು. ಕ್ರಾಂತಿಕಾರಿ ಸಮರಶೀಲ
ಚಳುವಳಿಯ ಹಳೆಯ ಸಂಪ್ರದಾಯಗಳನ್ನು ಮುಂದುವರಿಸುತ್ತಾ ಸಮೂಹ ಸಶಸ್ತ್ರ ಹೋರಾಟದ ಮೂಲಕ ಹೊಸ
ಸಮಾಜವಾದಿ ದೃಷ್ಟಿಕೋನವನ್ನು ಬೆಸೆಯುತ್ತಿದ್ದ ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ಶಿವ ವರ್ಮ ಮತ್ತು ಸು
ರ್ಯಾಚರಣೆಯ ದಿನ ತಾವು ನಿಲ್ಲಬೇಕಾದ ಆಯಕಟ್ಟಿನ ಜಾಗವನ್ನು
ಇಬ್ಬರೂ ಕ್ರಾಂತಿಕಾರಿಗಳು ನೋಡಿಕೊಂಡರು. ಭಗತ್ ನನ್ನು ತಾನಿನ್ನೆಂದೂ ನೋಡಲಾರೆನೇನೋ ಎಂಬ
ಭಾರವಾದ ಹೃದಯದಿಂದ ಚಂದ್ರಶೇಖರ್ ಆಜಾದ್ರು ಇವರನ್ನು ಬೀಳ್ಕೊಟ್ಟರು. ಈವೆರಡೂ ಕಾಯಿದೆಗಳು
ಅಂಗೀಕಾರಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲವಾದ್ದರಿಂದ ಚರ್ಚೆಯ ನಡುವೆ ಭಗತ್ & ಬಿ.ಕೆ. ದತ್ ಎದ್ದುನಿಂತು ಬಾಂಬೊಂದನ್ನು ಸಭೆಯತ್ತ
ಎಸೆದರು. 'ಇಂಕ್ವಿಲಾಬ್-ಜಿಂದಾಬಾದ್',
'ಬ್ರಿಟೀಷ್ ಸಾಮ್ರಾಜ್ಯಶಾಹಿಗೆ
ಧಿಕ್ಕಾರ' ಎಂಬ ಘೋಷಣೆಗಳನ್ನು
ಕೂಗುತ್ತಾ ಕರಪತ್ರ ತೂರಿದರು. ಸುಲಭವಾಗಿ ತಪ್ಪಿಸಿಕೊಳ್ಳಬಹುದಾಗಿದ್ದರೂ ಅದಕ್ಕಾಗಿ
ಯಾವುದೇ ಪ್ರಯತ್ನ ಮಾಡದೆ ಇಬ್ಬರೂ ಮಂಜುಗಡೆಯಂತೆ ದಸ್ತಗಿರಿಯಾಗಲು ನಿಂತಾಗ ಕೆಲವು ಸಮಯದ
ನಂತರವಷ್ಟೇ ಪೋಲೀಸರು ಎಚ್ಚೆತ್ತು ಅವರನ್ನು ಬಂಧಿಸಲನುವಾದರು. ನ್ಯಾಯಾಲಯವನ್ನು ಪ್ರಚಾರ
ಮಾಧ್ಯಮವನ್ನಾಗಿ ಭಗತ್ ಸಂಪೂರ್ಣವಾಗಿ ಬಳಸಿಕೊಂಡು ಕಿವುಡಾಗಿದ್ದ ಬ್ರಿಟೀಷ್ ಪ್ರಭುತ್ವ ಕಿವಿ
ನಿಮಿರುವಂತೆ ಮಾಡುವದಷ್ಟೆ ಅವರ ಮತ್ತು ಸಂಘಟನೆಯ ಮುಖ್ಯ ಧ್ಯೇಯವಾಗಿತ್ತು. ಅಸೆಂಬ್ಲಿಯಲ್ಲಿ ಬಾಂಬು ದಾಳಿಯಾದ ತಕ್ಷಣವೆ
ಪ್ರಗತಿಪರ ಎಂಬ ಖ್ಯಾತಿಗೆ ಪಾತ್ರರಾಗಿದ್ದ ಕಾಂಗ್ರೆಸ್ ಸದಸ್ಯ ಚಮನ್ಲಾಲ್ ಇದನ್ನು ಖಂಡಿಸಿ ಬಾಂಬ್
ಎಸೆಯುವುದು ಹುಚ್ಚುತನ ಎಂದದಕ್ಕೆ, ಮೊದಲ ಭೇಟಿಯಲ್ಲಿಯೇ
ಭಗತ್ಸಿಂಗ್ರವರು ತನ್ನ ಲಾಯರಾಗಿದ್ದ ಮತ್ತೊಬ್ಬ ಕಾಂಗ್ರೆಸ್ ಸದಸ್ಯ ತರುಣ್ ಅಸಫ್ ಆಲಿಗೆ
ಹೇಳಿದ್ದು: 'ನಾವು ಹುಚ್ಚರಲ್ಲ
ಎಂಬುದನ್ನು ದಯಮಾಡಿ ಚಮನ್ಲಾಲ್ಗೆ ಮನದಟ್ಟು ಮಾಡಿ. ನಾವು ಸ್ಥಿತಿಗತಿಗಳ, ಆಶೋತ್ತರಗಳ ಗಂಭೀರ ವಿದ್ಯಾಥರ್ಿಗಳು ಎಂಬುದನ್ನು
ವಿನಮ್ರವಾಗಿ ತಿಳಿಸುತ್ತೇವೆ'. ಭಗತ್ ಸಿಂಗರು ಅಪರಾಧಕ್ಕೆ ಶಿಕ್ಷೆ ವಿಧಿಸಿದ ನಂತರ
ಅವರನ್ನು ಕೆಲಕಾಲ ಮಿಯಾನ್ವಾಲಿ ಜೈಲಿನಲ್ಲಿಟ್ಟಿದ್ದು ನಂತರ ಲಾಹೋರ್ ಸೆಂಟ್ರಲ್ ಜೈಲಿಗೆ
ರವಾನಿಸಲಾಯಿತು. ಸ್ಯಾಂಡರ್ಸ ಹತ್ಯೆ, ಲಾಹೋರ್ ಪಿತೂರಿ
ಮೊಕದ್ದಮೆ ಹೀಗೆ ಹಲವು ಅಪರಾದಗಳ ಸರಣಿ ಪಟ್ಟಿಯನ್ನು ಅವರ ಸುತ್ತಲೂ ಬ್ರಿಟೀಷರು
ಹೆಣೆಯಲಾರಂಭಿಸಿದರು. ಅಪ್ರತಿಮ ವೀರರು ಎಲ್ಲಿದ್ದರೂ ಆಸ್ಟೋಟಿಸುತ್ತಾರೆ, ಶತ್ರುಪಾಳೆಯವನ್ನು ಛಿದ್ರಗೊಳಿಸಿತ್ತಾರೆ, ಅವರನ್ನು ಪದೇ ಪದೇ ಘಾಸಿಗೊಳಿಸಿ ಧೂಳಿಪಟಮಾಡುತ್ತಾರೆ. ಅಂತೆಯೇ ರಾಜಕೀಯ ಬಂಧಿಗಳಿಗೆ ಜೈಲಿನಲ್ಲಿ
ನೀಡಲಾಗುತ್ತಿದ್ದ ಕಿರುಕುಳವನ್ನು ಪ್ರತ್ಯಕ್ಷ ಕಂಡ ಭಗತ್ ಸಿಂಗ್ , ಉತ್ತಮ ಸೌಲಭ್ಯಗಳಿಗಾಗಿ ಉಪವಾಸ ಸತ್ಯಾಗ್ರಹ ಹೂಡಿ
ಬಂಧಿಗಳಿಗೆ ಸ್ವಲ್ಪ ಮಟ್ಟಿಗೆ ಉತ್ತಮ ಆಹಾರ ಮತ್ತು ಓದಲು ಬೇಕಾದ ಸೌಲಭ್ಯ ಒದಗಿಸುವಲ್ಲಿ
ಸತ್ಯಾಗ್ರಹವು ಯಶಸ್ವಿಯಾಯಿತು. ಚಂದ್ರಶೇಖರ ಅಜಾದ್ ನಾಯಕತ್ವದಲ್ಲಿ ಹಿಂದೂಸ್ತಾನ್ ಸಮಾಜವಾದಿ
ಗಣತಂತ್ರ ಸಂಘಟನೆಯು ಭಗತ್ರನ್ನು ಜೈಲಿನಿಂದ ಅಪಹರಿಸಿ ಬಿಡಿಸಿಕೊಂಡು ಬರಲು ಯೋಜಿಸಿದ ಯಾವ
ತಂತ್ರಗಳೂ ಫಲಿಸದೆ ಕಾರ್ಯಕರ್ತರು ಕಂಗೆಟ್ಟರು. ಜೈಲಿನಲ್ಲಿ ಬಂಧಿಯಾಗಿದ್ದ ದಿನಗಳಲ್ಲಿ ಹಲವು
ಪುಸ್ತಕಗಳನ್ನು ತರುವಂತೆ ಸಹಚರರಲ್ಲಿ ದುಂಬಾಲು ಬೀಳುತ್ತಿದ್ದರು. ಅವರು ಓದಿ ಮುಗಿಸಿದ ಕೆಲವು ಅತಿ
ಮುಖ್ಯ ಪುಸ್ತಕಗಳೆಂದರೆ, 'ಜನತೆ ಏಕೆ
ಹೋರಾಡುತ್ತದೆ?', 'ಎರಡನೆ
ಅಂತರಾಷ್ಟ್ರೀಯದ ಪತನ', 'ಎಡಪಂಥೀಯ ಸಮತಾವಾದ',
'ಫ್ರಾನ್ಸಿನಲ್ಲಿ ಅಂತರ್ಯುದ್ಧ',
'ಚಾರಿತ್ರಿಕ ಭೌತವಾದದ
ಸಿದ್ದಾಂತ', 'ರೈತಾಪಿ ಜನರ ಏಳಿಗೆ
ಮತ್ತು ಋಣಬಾಧೆ', ಇತ್ಯಾದಿ. ಅವರು
ಚಿಂದಿ ಬಟ್ಟೆಯಲ್ಲಿದ್ದರೂ ಸಹ ಪುಸ್ತಕಗಳ ಜೋಳಿಗೆ ಅವರ ಕಂಕುಳಲ್ಲಿ ಸದಾ ಜೋತಾಡುತ್ತಿತ್ತು. ಬಂಡೆಕಲ್ಲುಗಳನ್ನೇ ಪುಡಿಗಟ್ಟುವಷ್ಟು ತೀಕ್ಷ್ಣ
ಶಕ್ತಿ ಹೊಂದಿದ್ದ ಭಗತ್ಸಿಂಗ್ ಸೆರೆಮನೆಯ ಸಂಕಷ್ಟ, ಯಾತನೆಗಳಿಂದಾಗಿ ಕೊನೆಕೊನೆಗೆ ಬಸವಳಿದು ಕೃಷವಾಗಿದ್ದ
ದೇಹ ಎಂಥಹವರಲ್ಲೂ ಕಣ್ಣೀರು ಹರಿಸುವಂತಿತ್ತು. ಆದರೆ ಅವರ ಕಣ್ಣುಗಳಲ್ಲಿನ ತೇಜಸ್ಸಿನ ಪ್ರಖರತೆ
ಮತ್ತಷ್ಟು ಮಗಧಷ್ಟು ಇಮ್ಮಡಿಗೊಳ್ಳುತ್ತಿತ್ತು. ಸೆರೆಮನೆಯಲ್ಲಿದ್ದಷ್ಟೂ ದಿನವೂ 'ಕಾಕೋರಿ ದಿನೋತ್ಸವ', 'ಲೆನಿನ್ ದಿನೋತ್ಸವ', ಹೀಗೆ ಮುಂತಾದ ಕ್ರಾಂತಿಕಾರಿ ಉತ್ಸವಗಳನ್ನು
ಆಚರಿಸುತ್ತಾ ಖುಷಿ ಪಡುತ್ತಿದ್ದರು. ಸಂಪೂರ್ಣ ಮಾರ್ಕ್ಸ್ ವಾದಿಗಳಾಗಿ
ಪರಿವರ್ತಿತರಾಗದಿದ್ದರೂ ಮಾರ್ಕ್ಸ್ ವಾದವನ್ನು ಇಂಚಿಂಚೂ ಅಭ್ಯಸಿಸುತ್ತಾ ವಿಷಯದಿಂದ ವಿಷಯವನ್ನು
ಗ್ರಹಿಸುವ ಪ್ರಕ್ರಿಯೆಯ ಹಾದಿಯಲ್ಲಿದ್ದರು. ಅವರು ಅಧ್ಯಯನದ ಮೂಲಕ ಸಿದ್ದಾಂತವನ್ನು ಒಂದು
ಅಸ್ತ್ರವಾಗಿ ವಿರೋಧಿಗಳ ಕಪಟತೆಯನ್ನು ಛಿದ್ರಗೊಳಿಸಲು ಕ್ರಿಯೆಯಾಗಿ ಬಳಸುತ್ತಿದ್ದರು. ಲಾಹೋರ್
ಉಚ್ಚ ನ್ಯಾಯಾಲಯದಲ್ಲಿ ಭಗತ್ ಸಿಂಗ್ ನುಡಿದ ಮಾತುಗಳು ಅವರ ಪ್ರಖರ ಪಾಂಡಿತ್ಯಕ್ಕೆ ಹಿಡಿದ
ಕನ್ನಡಿಯಂತಿವೆ: 'ಕ್ರಾಂತಿಯ
ಖಡ್ಗವನ್ನು ವಿಚಾರದ ಸಾಣೆಕಲ್ಲಿನ ಮೇಲೆ ಹರಿತಗೊಳಿಸಲಾಗುತ್ತದೆ'. ಗಾಂಧೀಜಿಯವರ ಬಗ್ಗೆ ಅವರಿಗೆ ಗೌರವವಿದ್ದರೂ
ಸೈದ್ದಾಂತಿಕ ನಿಲುಮೆಯ ಕುರಿತು ಅವರು ಈ ರೀತಿ ನುಡಿದಿದ್ದಾರೆ: 'ಗಾಂಧೀಜಿಯು ಒಬ್ಬ ಉದಾರ ಹೃದಯದ ಪರೋಪಕರಿ ಮನುಷ್ಯ.
ನಮಗೆ ಅಗತ್ಯವಿರುವುದು ಪರೋಪಕಾರವಲ್ಲ, ಆದರೆ ಚಲನಾತ್ಮಕ
ವೈಜ್ಞಾನಿಕ ಸಾಮಾಜಿಕ ಶಕ್ತಿ'. 1929 ರಲ್ಲಿ ಅವರನ್ನು
ಬಂಧಿಸುವ ಹೊತ್ತಿಗಾಗಲೇ ಅವರು ಭಯೋತ್ಪಾದಕ ಮತ್ತು ವ್ಯಕ್ತಿಗತವಾದ ವೀರೋಚಿತ ಕಾರ್ಯಗಳಲ್ಲಿ
ನಂಬಿಕೆ ಕಳೆದುಕೊಂಡು "ಕ್ರಾಂತಿಯೊಂದು ಸಮೂಹಕ್ಕಾಗಿ ಸಮೂಹ ನಡೆಸುವ ಕ್ರಿಯೆ" ಎಂಬ
ದೃಢ ನಿಲುಮೆಗೆ ಬಂದಿದ್ದರು. ಇದಕ್ಕೆ ಪೂರಕವಾಗಿಯೇನೋ ಎಂಬಂತೆ ಅವರನ್ನು ಗಲ್ಲಿಗೇರಿಸುವ ಸ್ವಲ್ಪ
ಮುಂಚಿತವಾಗಿ "ನಿಜವಾದ ಕ್ರಾಂತಿಕಾರಿ ಸೇನೆಯು ಹಳ್ಳಿ ಮತ್ತು ಕಾರ್ಖಾನೆಗಳಲ್ಲಿವೆ"
ಎಂದಿದ್ದರು. ಭಗತ್ ಸಿಂಗ್ ಒಬ್ಬ ಮಾರ್ಕ್ಸ್ ವಾದಿ ಯಾಗಿದ್ದರು
ಹಾಗೂ ಅಂದಿನ ಹಿಂದು ಮಹ ಸಭಾ ಮತ್ತು ಮುಸ್ಲಿಂ ಲೀಗ್ ನ ವಿರೋಧಿಯಾಗಿದ್ದರು
ಕ್ರಾಂತಿಕಾರಿಯ
ಸಾವಿನ ಗಳಿಗೆಗಳು:
ಭಗತ್ ಸಿಂಗ್ ರವರ ಕೊನೆಯ ದಿನಗಳಲ್ಲಿ ಸಂಘಟನೆಯ
ಬಹುತೇಕ ಮಂದಿ ಸೆರೆಮನೆಯಲ್ಲಿ ನ್ಯಾಯಾಲಯದ ಕುರಿತು ಚರ್ಚಿಸುತ್ತಿದ್ದಾಗ ರಾಜಗುರು ಮತ್ತು
ಭಗತ್ಸಿಂಗ್ರಿಬ್ಬರೂ ಗಲ್ಲಿಗೇರುವುದು ಖಚಿತವೆಂದು ತಿಳಿದಿದ್ದರಿಂದ ಅವರನ್ನು ಹೊರತುಪಡಿಸಿ
ತಮಾಷೆಗಾಗಿ ಒಬ್ಬರ ಮೇಲೊಬ್ಬರು ಗಲ್ಲು ಶಿಕ್ಷೆ ವಿಧಿಸಿಕೊಂಡು ನಗೆಯಾಡುತ್ತಿದ್ದರು.'ರಾಜಗುರು ಮತ್ತು ನನಗೆ ಏಕೆ ಶಿಕ್ಷೆ ವಿಧಿಸಲಿಲ್ಲ?
ನಮ್ಮನ್ನು
ಬಿಡುಗಡೆಗೊಳಿಸುತ್ತೀರೇನು?' ಎಂದು ನಗುತ್ತಾ
ಕೇಳಿದ ಭಗತ್ ಸಿಂಗ್ ಮಾತುಗಳು ಅವರಲ್ಲಿ ಕಂಪನ ಸೃಷ್ಟಿಸಿದವು. ಯಾರಲ್ಲಿಯೂ ಉತ್ತರವಿಲ್ಲದೆ ನಿಶ್ಯಬ್ಧ, ನಿರ್ಲಿಪ್ತತೆ ಆವರಿಸಿದವು. ಮತ್ತಷ್ಟು ಛೇಡಿಸುವ
ಧ್ವನಿಯಲ್ಲಿ 'ವಾಸ್ತವವನ್ನು
ಗುರುತಿಸಲು ಭಯವೇ?' ಎಂದು ಭಗತ್
ನುಡಿದಾಗ ಇನ್ನಷ್ಟು ನಿಶ್ಯಬ್ಧ ಮನೆಮಾಡಿ ಸೂತಕದ ವಾತಾವರಣ ಉಂಟಾಯಿತು. ನಿಶ್ಯಬ್ಧ ಮತ್ತು
ಮೌನವನ್ನು ತನ್ನ ನಗುವಿನಿಂದ ಭೇಧಿಸುತ್ತಾ ಹೇಳಿದ:"ನಾವು ಸಾಯೋವರೆಗೆ ಕುತ್ತಿಗೆಗೆ ಕುಣಿಕೆ
ಬೀರಿ ನಮ್ಮನ್ನು ನೇತು ಹಾಕುವುದು ನಿಜ, ಕಾಮ್ರೇಡ್ಸ್. ಇದು
ನನಗೂ ಗೊತ್ತು. ನಿಮಗೂ ಗೊತ್ತು. ಮತ್ತೇಕೆ ಅದರತ್ತ ಕಣ್ಣು ಮುಚ್ಚಿಕೊಳ್ಳಬೇಕು? ರಾಷ್ಟ್ರಾಭಿಮಾನಕ್ಕಾಗಿ ಸಿಗುವ ಅತ್ಯುನ್ನತ ಬಹುಮಾನ
ಅದು. ಅದು ನನಗೇ ಸಿಗುತ್ತಿರುವುದರಿಂದ ನನಗೆ ಹೆಮ್ಮೆಯೇ. ನನ್ನ ಬಾಹ್ಯ ದೇಹವನ್ನು ನಾಶಗೊಳಿಸಿ ಈ
ರಾಷ್ಟ್ರದಲ್ಲಿ ಅವರು ಸುರಕ್ಷಿತವಾಗಿರಬಹುದೆಂದು ಭಾವಿಸಿದ್ದಾರೆ. ಅದು ತಪ್ಪು ಕಲ್ಪನೆಯಷ್ಟೆ.
ಅವರು ನನ್ನನ್ನು ಕೊಲ್ಲಬಹುದಾದರೂ, ನನ್ನ ವಿಚಾರಗಳನ್ನು
ಕೊಲ್ಲಲು ಸಾಧ್ಯವಿಲ್ಲ. ವಿಚಾರಗಳಿಗೆ ಸಾವಿಲ್ಲ, ಸಿದ್ದಾಂತಗಳಿಗೆ ಅಳಿವಿಲ್ಲ. ಅವರು ನನ್ನ ದೇಹವನ್ನು ಪುಡಿಗಟ್ಟಹುದು. ಆದರೆ ನನ್ನ
ಚೈತನ್ಯವನ್ನು ಪುಡಿಗಟ್ಟಲಾರರು. ಬ್ರಿಟೀಷರು ಈ ನೆಲದಿಂದ ಕಂಬಿ ಕೀಳುವವರೆಗೂ ನನ್ನ
ವಿಚಾರಗಳು ಅವರನ್ನು ಅನಿಷ್ಟದಂತೆ ಬೆಂಬಿಡದೆ ಕಾಡುತ್ತವೆ". "ಇದು ಒಂದೆಡೆಯ
ಚಿತ್ರಣವಷ್ಟೆ. ಮತ್ತೊಂದೆಡೆಯದ್ದು ಮತ್ತಷ್ಟು ಪ್ರಕಾಶಮಾನವಾಗಿ ಹೊಳೆಯುತ್ತಿದೆ. ಬ್ರಿಟೀಷ್
ಗುಲಾಮಕೋರರಿಗೆ ಜೀವಂತ ಭಗತ್ ಸಿಂಗ್ ಗಿಂತ ಸತ್ತ ಭಗತ್ ಸಿಂಗ್ ಹೆಚ್ಚು ಅಪಾಯಕಾರಿ. ನನ್ನನ್ನು
ನೇಣಿಗೇರಿಸಿದ ನಂತರ, ನನ್ನ ಕ್ರಾಂತಿಕಾರಿ
ವಿಚಾರಗಳ ಸುವಾಸನೆಯು ನಮ್ಮ ಸುಂದರನಾಡಿನ ವಾತಾವರಣದಲ್ಲಿ ಪಸರಿಸುತ್ತದೆ. ಅವು ಯುವಜನರನ್ನು ಪ್ರೇರೇಪಿಸಿ ಸ್ವಾತಂತ್ರ್ಯ ಮತ್ತು
ಕ್ರಾಂತಿಗಾಗಿ ಅವರನ್ನು ಹುಚ್ಚರನ್ನಾಗಿಸಿ ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನು ವಿನಾಶದಂಚಿಗೆ
ತಳ್ಳುತ್ತವೆ. ಇದು ನನ್ನ ಖಚಿತಾಭಿಪ್ರಾಯ. ರಾಷ್ಟ್ರಕ್ಕಾಗಿ ನಾನು ಸಲ್ಲಿಸಿದ ಸೇವೆ ಮತ್ತು ನನ್ನ
ಜನತೆಗಾಗಿ ತೋರಿದ ಪ್ರೀತಿಗಳಿಗೆ ನೀಡುವ ಅತ್ಯುನ್ನತ ಬಹುಮಾನವನ್ನು ನಾನು ಪಡೆಯುವ ದಿನವನ್ನು ಅತಿ
ಕಾತುರತೆಯಿಂದ, ಸಂಭ್ರಮ ಸಡಗರದಿಂದ
ಇದಿರು ನೋಡುತ್ತಿದ್ದೇನೆ".
ಭಗತ್ ಸಿಂಗ್ ರು
ಜೈಲಿನಲ್ಲಿ ಕಳೆದ ಕೊನೆಯ ದಿನಗಳಂದು ಅವರ ತಾಯಿಯ ದಿಟ್ಟತನದ ನುಡಿಗಳು ನಿಜಕ್ಕೂ ಆಪ್ಯಾಯಮಾನ:
"ನಿನ್ನ ನಿಲುಮೆಯನ್ನು ಎಂದಿಗೂ ಬದಲಿಸಬೇಡ. ಪ್ರಪಂಚವೇ ಮರೆಯಲಾಗದ ಸಾವು ಎಂದಿಗೂ
ಅತ್ಯುತ್ತಮವಾದದ್ದು. 'ಇಂಕ್ವಿಲಾಬ್
ಜಿಂದಾಬಾದ್' ಘೋಷಣೆಯನ್ನು
ಕೊನೆಯವರೆಗೂ ಕೂಗುತ್ತಿರು. ಯಾವ ತಾಯಿಗೂ ಲಭಿಸದ ಹೆಮ್ಮೆ ನನಗುಂಟಾಗಿದೆ".
ಜೈಲಿನ ವಾರ್ಡನ್ ಚರತ್ ರವರು ಭಗತ್ ಸಿಂಗ್ ಓದಲು
ಬಯಸಿದ ಎಲ್ಲ ಪುಸ್ತಕಗಳನ್ನೂ ಜೈಲಿನ ಸೆಲ್ಲಿನೊಳಕ್ಕೆ ಕದ್ದು ತಂದುಕೊಡುತ್ತಿದ್ದರೂ ಭಗತ್ ಸಿಂಗ್
ಓದುವ ವೇಗಕ್ಕೆ ತಕ್ಕಂತೆ ಪುಸ್ತಕಗಳನ್ನೂ ಪೂರೈಸಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಸಾವಿನ
ಕರೆಗಂಟೆಯಂತೆ ಸೈನಿಕ ನೊಬ್ಬ ನೇಣುಗಂಬಕ್ಕೆ ಎಳೆದೊಯ್ಯಲು ಬಂದಾಗಲೂ ಲೆನಿನ್ ಕುರಿತ
ಪುಸ್ತಕವನ್ನೋದುತ್ತಿದ್ದ ಭಗತ್ಸಿಂಗ್ರು ಸ್ವಲ್ಪವೂ ವಿಚಲಿತರಾಗದೆ ಪುಸ್ತಕ 'ಮುಗಿಸಿದ ನಂತರ ಬಂದರಾಗುತ್ತದಲ್ಲವೇನು?' ಎಂದು ಸೈನಿಕನಿಗೆ ಗಂಭೀರವಾಗಿಯೇ ಕೇಳಿದುದು ನಿಜಕ್ಕೂ
ಮೈನವಿರೇಳಿಸುತ್ತದೆ. ಗಲ್ಲಿಗೇರಿಸುವ ದಿನ ಸಹ ಎದೆಗುಂದದೆ
ಖುಷಿಯಿಂದಿದ್ದರು. ಗಲ್ಲು ಸ್ಥಳದ ಪ್ಲಾಟ್ಫಾರಂ ಮೇಲೆ ನಿಂತು ಹಗ್ಗಕ್ಕೆ ಮುತ್ತಿಕ್ಕುತ್ತಾ
"ಇಂಕ್ವಿಲಾಬ್ ಜಿಂದಾಬಾದ್" ಘೋಷಣೆ ಮಾಡುತ್ತಾ ಸುಖ್ದೇವ್, ಭಗತ್ ಮತ್ತು ರಾಜಗುರು ಕುಣಿಕೆ ಬೀರಿಕೊಂಡರು. ಅಂದು
ಸೆರೆಮನೆಯಲ್ಲಿ ಶ್ಮಶಾನಮೌನ ಆವರಿಸಿ, ಯಾರೊಬ್ಬರೂ ಆಹಾರ
ಮುಟ್ಟಲಿಲ್ಲ. ಅವರನ್ನು ಗಲ್ಲಿಗೇರಿಸಿದ ವಿಷಯ ತಿಳಿಯದ ಅವರ ಸಂಬಂಧಿಕರು ಸಂಧಿಸಲು ಬಂದಾಗ
ಗದ್ಗದಿತರಾದರು. ಸಟ್ಲೆಜ್ ನದಿತೀರದಲ್ಲಿ ಕ್ರಾಂತಿಕಾರಿಗಳ ದೇಹವನ್ನು
ರಹಸ್ಯವಾಗಿ ಸುಡುತ್ತಿರುವ ವಿಷಯ ತಿಳಿದು ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸತೊಡಗಿದರು.
ಅಲ್ಲಿ ದೊರೆತದ್ದು ಅರೆಬರೆ ಸುಟ್ಟ ಕ್ರಾಂತಿಕಾರಿಗಳ ದೇಹದ ಬೂದಿಯಷ್ಟೆ. ಬ್ರಿಟಿಷರು ಭಗತ್ ಸಿಂಗ್
ನ್ನು ಕೊಂದದ್ದು ಅವರ ಸಾಮ್ರಾಜ್ಯಶಾಹಿ ಭೂಪಟಕ್ಕೆ ತಾವೇ ಚೂರಿಯಿಂದ ತಿವಿದುಕೊಂಡಂತಾಯಿತಷ್ಟೆ.
ಭಗತ್ರನ್ನು ರಕ್ಷಿಸಲು ಗಾಂಧೀಜಿ ನಡೆಸಿದ ಪ್ರಯತ್ನಗಳನ್ನು ಪ್ರಶ್ನಿಸಿ ದೇಶದಾದ್ಯಂತ ಯುವಕರ
ಪಡೆಯು ಅವರು ಸಿಕ್ಕಲ್ಲೆಲ್ಲ ಧಮಕಿ ಹಾಕತೊಡಗಿತು. ಅಂಥಹದೊಂದು ಸಂದರ್ಭದಲ್ಲಿ ಅವರು ನೀಡಿದ ಉತ್ತರ
ಎಂಥಹವರಲ್ಲೂ ವೇದನೆ ಮೂಡಿಸದಿರದು: "ಭಗತ್ಸಿಂಗ್ರನ್ನು ರಕ್ಷಿಸಲು ನನಗಿಚ್ಚೆಯಿರಲಿಲ್ಲವೆಂಬುದು
ಸತ್ಯಕ್ಕೆ ದೂರವಾದದ್ದು. ಆದರೆ ನೀವು ಭಗತ್ಸಿಂಗ್ ಎಸಗಿರುವ ತಪ್ಪನ್ನೂ
ಅರ್ಥಮಾಡಿಕೊಳ್ಳಬೇಕು". ಆದರೆ ಹಿಂಸೆಯ ಕುರಿತೂ ಬೇಸತ್ತಿದ್ದ ಭಗತ್ಗೆ ಗಾಂಧಿಯ 'ಬೇಜವಾಬ್ದಾರಿ ಯುವಕರು' ಎಂಬ ವರ್ಣನೆ ಕಿರಿಕಿರಿ ಉಂಟು ಮಾಡಿತ್ತು. ಸ್ವಾತಂತ್ರ್ಯವನ್ನು ಬ್ರಿಟಿಷರಿಂದ
ಕಿತ್ತುಕೊಳ್ಳಬೇಕೇ ಹೊರತು ಅದೇನೂ ಆಕಾಶದಿಂದ ಬೀಳುವುದಿಲ್ಲ ಅಥವಾ ಚಳುವಳಿಗಳನ್ನು
ಹಿಂತೆಗೆದುಕೊಂಡು ಶಾಂತಿಯ ಹೋಮ ಮಾಡಿದರೆ ಬರುವುದಲ್ಲವೆಂದು ಭಗತ್ ರಿಗೆ ತಿಳಿದಿತ್ತು.
ಕ್ರಾಂತಿಕಾರಿಗಳೆಂದರೆ ಕ್ರೌರ್ಯ, ಬೀಭತ್ಸತೆಗಳ
ಮುಖವಾಡ ಹೊದ್ದವರೆಂದು ಭಾವಿಸುವವರು ಭಗತ್ರ ತೇಜಸ್ಸು ತುಂಬಿದ ಮುಖವನ್ನು ನೋಡಿದಲ್ಲಿ ಅವನೊಬ್ಬ
ಅಸಾಧಾರಣ ಅದ್ಭುತವೇ ಸರಿಯೆನಿಸುತ್ತದೆ. ಭಗತ್ ಸಿಂಗ್ ಯಾವುದೇ ಕ್ಷಣದಲ್ಲೂ ಸಹ ಸಾಧಕನ
ಮೂರ್ತಿವೆತ್ತ ಪ್ರತಿಮೆಯಂತಿದ್ದರು. ಮನುಷ್ಯನಿಂದ ಮನುಷ್ಯನ ಶೋಷಣೆಯನ್ನು ಕೊನೆಗಾಣಿಸುವುದೇ
ಅಂತಿಮ ಧ್ಯೇಯವೆನ್ನುವ ಅವರ ಮಾತುಗಳು, ಅವರಲ್ಲಿಯ
ಮಾನವತೆಯು ಹೆಬ್ಬಂಡೆಯೊಳಗೆ ಅರಳಿ ನಿಂತಿರುವ ಹೂವುಗಳಂತೆ ಸದಾ ರಾರಾಜಿಸುತ್ತಿತ್ತು. ಸದಾ ಕತ್ತಿಯ
ಅಲುಗಿನ ಮೇಲೆಯೇ ನಡೆಯುತ್ತಿದ್ದ ಯುವಜನರ ಆಸ್ಫೋಟಕ ಧ್ವನಿ ಇನ್ನಿಲ್ಲದಂತಾದರೂ ಅಂಥಹ ಸಾವಿರಾರು
ಪ್ರತಿಧ್ವನಿಗೆ ಕಾರಣವಾಗುವಲ್ಲಿ ಯಶಸ್ವಿಯಾದರು. ಅವರ ಸಾವು ಸ್ವಾತಂತ್ರ್ಯದ ಕಿಡಿಯನ್ನು ದೇಶಾದ್ಯಂತ
ಮತ್ತಷ್ಟು ವ್ಯಾಪಿಸಿ ಯುವಜನರಲ್ಲಿ ವಿದ್ಯುತ್ ಸಂಚಲನ ಉಂಟುಮಾಡಿತು. ಭಗತ್ ಸಿಂಗ್ ಭವಿಷ್ಯವಾಣಿ
ಸುಳ್ಳಾಗಲಿಲ್ಲ. ಅವರ ಹೆಸರು ಸಾವಿಗಳುಕದ ಧೈರ್ಯ, ತ್ಯಾಗ ಬಲಿದಾನ, ರಾಷ್ಟ್ರಾಭಿಮಾನ
ಮತ್ತು ತದೇಕಚಿತ್ತತೆಯ ಹೋರಾಟಗಳ ಪ್ರತೀಕವಾಯಿತು. ಅವರ 'ಇಂಕ್ವಿಲಾಬ್ ಜಿಂದಾಬಾದ್ (ಕ್ರಾಂತಿ ಚಿರಾಯುವಾಗಲಿ)'
ಘೋಷಣೆಯು ಇಡೀ ರಾಷ್ಟ್ರದ
ಯುದ್ದದ ಕೂಗಾಗಿ ಮಾರ್ಪಟ್ಟು ಸಮಾಜವಾದಿ ಸಮಾಜ ನಿರ್ಮಾಣದ ಕನಸನ್ನು ವಿದ್ಯಾವಂತ ಯುವಜನರಲ್ಲಿ
ಹಿಡಿದಿಟ್ಟಿತು. 1930 - 32 ರಲ್ಲಿ ಎಲ್ಲ ಜನರು ಒಂದೇ ಮನುಷ್ಯನಂತೆ ನಿಂತರು.
ಸೆರೆಮನೆವಾಸಗಳು, ಛಡಿಯೇಟುಗಳು,
ಮತ್ತು ಲಾಠಿಯೇಟುಗಳು ಅವರ
ಸ್ಫೂರ್ತಿಯನ್ನು ಕಂಗೆಡಿಸಲು ಸಾಧ್ಯವಾಗಲಿಲ್ಲ. 1945 - 46 ರಲ್ಲಿ ನವಭಾರತ ಉದಯಿಸಿದ್ದನ್ನು ಇಡೀ ಪ್ರಪಂಚವೇ
ಕಣ್ಣಾರೆ ಕಂಡಿತು. ಕಾರ್ಮಿಕರು, ರೈತರು, ವಿದ್ಯಾರ್ಥಿಗಳು, ಯುವಜನರು, ಜಲಸೇನೆ, ಭೂಸೇನೆ, ವಾಯುಸೇನೆ, ಮತ್ತು ಪೊಲೀಸರು ಸಹ ಬಲವಾದ ಹೊಡೆತಗಳನ್ನನುಭವಿಸಿದರು. 1930 ರವರೆಗೆ ಕೆಲವೇ ಕೆಲವರಲ್ಲಿದ್ದ ತ್ಯಾಗ, ಬಲಿದಾನ ಮತ್ತು ಅರ್ಪಣಾ ಮನೋಭಾವನೆಗಳು ಸಮೂಹ
ಪ್ರಕ್ರಿಯೆಯಾಗಿ ರಾಷ್ಟ್ರಾದ್ಯಂತ ದಂಗೆಯು ವ್ಯಾಪಿಸಿತು. ಭಗತ್ ಸಿಂಗ್ ಅವರಿಗೆ ಸ್ವಾತಂತ್ರ್ಯ
ಸಿಗುವ ಕುರಿತು ಯಾವುದೇ ಅನುಮಾನವಿರಲಿಲ್ಲವಾದರೂ ಅವರು ಆತಂಕ ಗೊಂಡಿದದ್ದು ಬಿಳಿ ಸಾಹೇಬರು ಖಾಲಿ
ಮಾಡಿದ ಆಸನದಲ್ಲಿ ಕಂದು ಸಾಹೇಬರು ಕುಳಿತುಕೊಳ್ಳುವರೆಂಬ ಭಯದಿಂದ. 'ಕೇವಲ ಯಜಮಾನರ ಬದಲಾವಣೆಯಿಂದ ಸ್ವಾತಂತ್ರ್ಯ
ಬಂದಂತಾಗುವುದಿಲ್ಲ. ಪುರಾತನ ವ್ಯವಸ್ಥೆಯನ್ನು ನಾಶಮಾಡದೆ ಹೊಸ
ಬದಲಾವಣೆಯನ್ನು ತರುವುದು ಸಾಧ್ಯವಿಲ್ಲ' ಎಂದು ಭಗತ್ ಸಿಂಗ್
ರವರಿಗೆ ಮನವರಿಕೆಯಾಗಿತ್ತು. ಆದರೆ ಪ್ರತಿಭಟನೆಯ ದಿವ್ಯ ಜ್ಯೋತಿ ಆರದಂತೆ ಉರಿಯಲು ತನ್ನಂಥವರು
ಸಾಯಲೇಬೇಕೆಂದು ಭಗತ್ ನಂಬಿದ್ದ. ಮಾರ್ಚ್ ೨೩ ೧೯೩೧ ರಂದು ಇವರನ್ನು ಬ್ರಿಟಿಷ್ ಸರ್ಕಾರವು
ಗಲ್ಲಿಗೇರಿಸಿತು. . ಭಗತ್ ಸಿಂಗ್ ಸಂಪೂರ್ಣ ನಾಸ್ತಿಕ ಮತ್ತು ಜಾತಿವಿರೋಧಿಯಾಗಿದ್ದರು ಸಾಯುವ
ಕೆಲವೇ ನಿಮಿಷಗಳ ಮೊದಲು ಪ್ರಾರ್ಥನೆಯಂತೆ ಭಗತ್ ನುಡಿದ ಮಾತುಗಳು ಎಂಥವರನ್ನೂ ಕೆಚ್ಚೆದೆಯ ಉತ್ತುಂಗಕ್ಕೇರಿಸಬಲ್ಲವು.
*'ಮೊದಲು ನಿಮ್ಮ
ವೈಯುಕ್ತಿಕತೆಯನ್ನು ನುಚ್ಚುನೂರು ಮಾಡಿ, ವೈಯುಕ್ತಿಕ ಸುಖದ
ಕನಸನ್ನು ಭಗ್ನಗೊಳಿಸಿ, ನಂತರ ಕೆಲಸ ಮಾಡಲು
ತೊಡಗಿ. ನೀವು ಒಂದೊಂದೇ ಅಂಗುಲ ಮುಂದಕ್ಕೆ ಸಾಗಬೇಕು. ಅದಕ್ಕೆ ಧೈರ್ಯ ಬೇಕು; ದೃಡ ನಿರ್ಧಾರ ಬೇಕು; ನಿರಂತರ ಪರಿಶ್ರಮ ಬೇಕು. ಯಾವ ಕಷ್ಟ ಕಾರ್ಪಣ್ಯಗಳೂ
ನಿರಾಶೆಗೊಳಿಸುವುದಿಲ್ಲ. ಯಾವ ವೈಫಲ್ಯಗಳೂ, ನಿಮ್ಮನ್ನು ಕಂಗೆಡಿಸುವುದಿಲ್ಲ. ತ್ಯಾಗ ಮತ್ತು ನರಳಾಟಗಳ ಅಗ್ನಿದಿವ್ಯವನ್ನು ಹಾದು ನೀವು
ವಿಜಯಶಾಲಿಗಳಾಗುತ್ತೀರಿ. ಈ ವೈಯುಕ್ತಿಕ ಗೆಲುವುಗಳು ಕ್ರಾಂತಿಯ ಬಹುದೊಡ್ಡ ಆಸ್ತಿ....'
ಸುಭಾಷ್ ಚಂದ್ರ ಬೋಸ್
ಸುಭಾಷ್
ಚಂದ್ರ ಬೋಸ್
ಸುಭಾಷ್ ಚಂದ್ರ
ಬೋಸ್ (সুভাষ চন্দ্র বসু;
ಜನನ: ಜನವರಿ ೨೩, ೧೮೯೭ — ಮರಣ (ಸಂಭಾವಿತ): ಆಗಸ್ಟ್ ೧೮, ೧೯೪೫) ನೇತಾಜಿ
ಎಂದೇ ಪ್ರಸಿದ್ಧರಾದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಜನನಾಯಕರಲ್ಲಿ ಒಬ್ಬರು. ಸ್ವಾಮಿ
ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾದ ಇವರು ಭಾರತ ಸ್ವಾತಂತ್ರ ಹೋರಾಟದಲ್ಲಿ ಅತ್ಯಂತ ವಿಶಿಷ್ಟ
ಪಾತ್ರವಹಿಸಿದವರು.
ವಿದ್ಯಾಭ್ಯಾಸ
ಸುಭಾಷ್‌ಚಂದ್ರ ಬೋಸ್ ಜನಿಸಿದ್ದು ೧೮೯೭ರ ಜನವರಿ
೨೩ರಂದು, ಒಡಿಶಾದ ಕಟಕ್‌ನಲ್ಲಿ.
ತಂದೆ ಜಾನಕೀನಾಥ ಬೋಸ್, ತಾಯಿ ಪ್ರಭಾವತಿ. ಆ
ದಂಪತಿಗಳ ೯ ಮಕ್ಕಳಲ್ಲಿ ಸುಭಾಷ್ ೬ನೇ ಯವರು.ಕಟಕ್‌ನಲ್ಲಿ ರಯಾವೆನ್‌ಶಾ ಕೊಲಿಜಿಯೇಟ್ ಶಾಲೆಯಲ್ಲಿ
ಪ್ರಾಥಮಿಕ ವ್ಯಾಸಂಗ, ಅಲ್ಲಿ
ಮುಖ್ಯೋಪಾಧ್ಯಾಯ ಬೇಣಿಮಾಧವದಾಸ್‌ರ ರಿಂದ ಪ್ರೇರಣೆ, ಮುಂದೆ ವಿವೇಕಾನಂದರ ಸಾಹಿತ್ಯಗಳು, ಪತ್ರಗಳು ಮತ್ತು ’ಕೊಲೊಂಬೋದಿಂದ ಆಲ್ಮೋರಾಕ್ಕೆ’ ಉಪನ್ಯಾಸಗಳಿಂದ ಪ್ರಭಾವಿತರಾದ ಬೋಸರು ಅರವಿಂದರ ’ಆರ್ಯ’ ಮಾಸಪತ್ರಿಕೆಯ ತಪ್ಪದ ಓದುಗ! ೧೯೧೯ರಲ್ಲಿ ತತ್ವಶಾಸ್ತ್ರ ವಿಭಾಗದಲ್ಲಿ ಬಿ.ಎ. ಪದವಿ,
ನಂತರ ೧೯೧೯ರ ಸೆಪ್ಟೆಂಬರ್
೧೫ರಂದು ಐ.ಸಿ.ಎಸ್ ಪರೀಕ್ಷೆಗಾಗಿ ಇಂಗ್ಲೆಂಡಿಗೆ ಪಯಣ. ೧೯೨೦ರ ಸೆಪ್ಟಂಬರ್‌ನಲ್ಲಿ ನಾಲ್ಕನೇ
ಸ್ಥಾನಿಗರಾಗಿ ಐ.ಸಿ.ಎಸ್ ಪದವಿ ಪ್ರಾಪ್ತಿ.ವಿದೇಶೀ ನೌಕರಿ ಒಲ್ಲೆ ಎಂದು ಗಳಿಸಿದ್ದ ಐ.ಸಿ.ಎಸ್.
ಪದವಿಯನ್ನು ೧೯೨೧ರ ಎಪ್ರಿಲ್ ೨೨ರಂದು ಬ್ರಿಟಿಷ್ ಸರ್ಕಾರದ ಭಾರತ ವ್ಯವಹಾರ ಸಚಿವ ಎಡ್ವಿನ್
ಮಾಂಟೆಗುಗೆ ಪತ್ರವೊಂದನ್ನು ಬರೆದು ಮರಳಿಸಿದ್ದರು ಬೋಸ್!
೨೦ ತಿಂಗಳ ಇಂಗ್ಲೆಂಡ್ ವಾಸದ ನಂತರ ೧೯೨೧ರ ಜುಲೈ
೧೬ರಂದು ಮುಂಬಯಿಗೆ ಮರಳಿದರು ಬೋಸ್. ಅಂದೇ ಗಾಂಧೀಜಿ ಜತೆ ಮೊದಲ ಭೇಟಿ.೧೯೨೧ರ ಆಗಸ್ಟ್‌ನಿಂದ
ಚಿತ್ತರಂಜನ್‌ದಾಸ್‌ರ ಮಾರ್ಗದರ್ಶನದಲ್ಲಿ ಯುವಕರ ಸಂಘಟನೆಗೆ ಆದ್ಯತೆ. ಚಳುವಳಿಯ
ಸಂದರ್ಭವೊಂದರಲ್ಲಿ ಮ್ಯಾಜಿಸ್ಟ್ರೇಟರು ೬ ತಿಂಗಳ ಸಜೆ ಘೋಷಿಸಿದಾಗ ’ಬರಿಯ ೬ ತಿಂಗಳೇ? ನನ್ನದೇನು ಕೋಳಿಕದ್ದ ಅಪರಾಧವೇ?’ ಎಂದಿದ್ದರು ಬೋಸ್!
ರಾಷ್ಟ್ರ ನಿರ್ಮಾಣದ ಜವಾಬ್ದಾರಿ
ರಾಷ್ಟ್ರ ನಿರ್ಮಾಣದ ಜವಾಬ್ದಾರಿಯುತ
ಸ್ಥಾನದಲ್ಲಿದ್ದು ರಾಷ್ಟ್ರಹಿತಕ್ಕೆ ಧಕ್ಕೆಯಾಗುವ ಯಾವುದೇ ವಿಷಯಗಳಲ್ಲಿ ದುರ್ಬಲನೀತಿ
ಹೊಂದಿರಬಾರದೆಂಬ ಸುಭಾಷ್‌ರ ದಿಟ್ಟನಿಲುವಿನ ಪ್ರತಿಧ್ವನಿಯಾಗಿತ್ತು ಆ ಮಾತು. ಕಾಂಗ್ರೆಸ್‌ನ
ಬಲಹೀನ ನಾಯಕತ್ವ, ದುರ್ಬಲ ಒಪ್ಪಂದಗಳು,
ಸ್ವಾಭಿಮಾನ ಶೂನ್ಯ ವರ್ತನೆಗೆ
ಪ್ರತಿಯಾಗಿ ಆತ್ಮಾಭಿಮಾನದ ಸ್ವರಾಜ್ಯಹೋರಾಟಕ್ಕೆ ಬಲತುಂಬಿದವರು ಸುಭಾಷರು. ತಾನು ಕಷ್ಟಪಟ್ಟುಗಳಿಸಿದ್ದ ಐ.ಸಿ.ಎಸ್. ಪದವಿಯನ್ನೇ
ತಿರಸ್ಕರಿಸಿ, ಸ್ವಾತಂತ್ರ್ಯ
ಸಂಗ್ರಾಮಕ್ಕೆ ಧುಮುಕಿದ ಬೋಸ್‌ರಿಗಿದ್ದ ರಾಜಕೀಯ ಚಿಂತನೆಯ ವೈಶಾಲ್ಯತೆ ಆ ಕಾಲಮಾನದ
ಯಾರೊಬ್ಬರಲ್ಲೂ ಇರಲಿಲ್ಲ. ಆಸ್ಟ್ರಿಯಾ, ಇಂಗ್ಲೆಂಡ್,
ಜರ್ಮನಿ, ಜಪಾನ್ ಸೇರಿದಂತೆ ಹತ್ತಾರು ರಾಷ್ಟ್ರಗಳಲ್ಲಿ ಮಿಂಚಿನ
ಓಡಾಟ ನಡೆಸಿ ಭಾರತೀಯ ಸ್ವರಾಜ್ಯ ಹೋರಾಟದ ದನಿಗೆ ತೀವ್ರತೆ ತಂದಿದ್ದ ಬೋಸರು, ತಾನು ನಂಬಿದ್ದ ಕ್ರಾಂತಿಪಥದಲ್ಲಿ ಎಂದೂ
ರಾಜಿಮಾಡಿದವರಲ್ಲ. ಶೀಘ್ರ ಸ್ವಾತಂತ್ರ್ಯಪ್ರಾಪ್ತಿಗಾಗಿ ಅವರು
ಮಂಡಿಸುತ್ತಿದ್ದ ವಾದಗಳು, ಅದಕ್ಕಾಗಿ
ಶ್ರಮಿಸಬೇಕಾದ ತ್ವರಿತ ಸಿದ್ಧತೆಗಳ ಕುರಿತು ಬೋಸ್‌ರ ನಿಲುವುಗಳೆಲ್ಲ ಕಾಂಗ್ರೆಸ್‌ನ ಮಂದಗಾಮಿ
ಗುಂಪಿಗೆ ಅಸಹ್ಯವಾಗಿತ್ತು. ಸ್ವತಃ ಗಾಂಧೀಜಿಯವರೇ ಹಲವು ಬಾರಿ ಬೋಸ್‌ರನ್ನು ಟೀಕಿಸಿದ್ದರು!
ಅವರಿಗೆ ದೂರಗಾಮಿ ಚಿಂತನೆ ಇಲ್ಲ ಎಂಬ ಆರೋಪ. ಆದರೆ ೧೯೩೮ರಲ್ಲಿ ಭಾರತದ ವಿಭಜನೆಯ ಮುಸ್ಲಿಂಲೀಗ್-
ಬ್ರಿಟಿಷರ ತಂತ್ರಗಾರಿಕೆಯ ಕುರಿತು ಮೊದಲಬಾರಿಗೆ ಬಹಿರಂಗವಾಗಿ ಎಚ್ಚರಿಸಿದರೂ ಮಂದಗಾಮಿಗಳಿಗೆ
ಕೇಳಿಸಲಿಲ್ಲ. ಪರಿಣಾಮವಾಗಿ ೯ ವರ್ಷದಲ್ಲೇ ದೇಶ ಹೋಳಾಯಿತು! ಬೋಸ್‌ರ ದೂರಗಾಮಿ ಚಿಂತನೆಗಳಿಗೂ
ಕವಡೆ ಕಿಮ್ಮತ್ತಿನ ಬೆಲೆ ಕೊಡದ ಕಾಂಗ್ರೆಸ್‌ನಿಂದ ಸ್ವತಃ ಹೊರಬಂದವರು ಬೋಸ್.
ಸ್ವರಾಜ್ಯಪಕ್ಷ ಸ್ಥಾಪನೆ
ಕಾಂಗ್ರೆಸ್‌ನ ಡೋಲಾಯಮಾನ ನೀತಿಗಳಿಗೆ ಬೇಸತ್ತು
ಚಿತ್ತರಂಜನ್‌ದಾಸ್‌ರಿಂದ ’ಸ್ವರಾಜ್ಯಪಕ್ಷ
ಸ್ಥಾಪನೆ. ಬೋಸ್‌ರು ದಾಸ್‌ರ ಜತೆಗೇ ಚಟುವಟಿಕೆಗಳಲ್ಲಿ ಭಾಗಿ. ೧೯೨೩ರ ಅಕ್ಟೋಬರ್‌ನಿಂದ ದಾಸ್‌ರು
ಸ್ಥಾಪಿಸಿದ್ದ ’ಫಾರ್‌ವರ್ಡ್’
ದಿನಪತ್ರಿಕೆಯ ನಿರ್ವಹಣೆಯ
ಜವಾಬ್ದಾರಿ. ೧೯೨೫ರ ಜೂನ್ ೧೬, ದಾಸ್‌ರ ನಿಧನ,
ಕ್ರಾಂತಿಕಾರಿ
ಚಟುವಟಿಕೆಗಳಿಗಾಗಿ ಬೋಸ್‌ರ ಬಂಧನ, ಬಿಡುಗಡೆ. ೧೯೨೭ರ ನವೆಂಬರ್‌ನಲ್ಲಿ ಬಂಗಾಳಪ್ರದೇಶ ಕಾಂಗ್ರೆಸ್‌ನ
ಅಧ್ಯಕ್ಷರಾಗಿ ಆಯ್ಕೆ, ಆದರೆ ಗಾಂಧಿ
ಪ್ರಣೀತ ಮಂದ ಮಾರ್ಗಕ್ಕಿಂತ ಸುಭಾಷ್‌ರದು ತೀರಾ ಭಿನ್ನ ಎಂಬುದು ಕ್ರಮೇಣ ಗೊತ್ತಾಯಿತು. ಹತ್ತಾರು
ಚಳುವಳಿಗೆ ನೇತೃತ್ವ, ಅಖಿಲಭಾರತ ಟ್ರೇಡ್
ಯೂನಿಯನ್ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆ.೧೯೩೩, ಫೆಬ್ರವರಿ ೨೩ರಂದು ಯೂರೋಪಿನಲ್ಲಿ ಭಾರತದ ಸ್ವಾತಂತ್ರ್ಯ
ಹೋರಾಟಪರ ಅಭಿಯಾನ. ಇಂಗ್ಲೆಂಡ್, ಆಸ್ಟ್ರಿಯಾ, ಇಟೆಲಿ ವಿಯೆನ್ನಾಗಳ ಭೇಟಿ, ತ್ವರಿತಗತಿಯ ಪ್ರವಾಸ, ಮಿಂಚಿನ ಓಡಾಟ. ಸ್ವಿಟ್ಜರ್ಲೆಂಡ್, ಚೆಕೋಸ್ಲೋವಾಕಿಯಾ, ಪೋಲೆಂಡ್, ಜರ್ಮನಿಗಳಲ್ಲಿ ಭಾರತದ ಪರ ಪ್ರಚಾರ. ಇಟೆಲಿ ಪ್ರಧಾನಿ
ಬೆನಿತೋ ಮುಸ್ಸೋಲಿನಿ ಜತೆ ಚರ್ಚೆ. ೧೯೩೬ ಏಪ್ರಿಲ್ ೮ರಂದು ಮರಳಿ ಭಾರತಕ್ಕೆ, ಬಂದರಲ್ಲೇ ಬಂಧನ. ೧೯೩೭ರಲ್ಲಿ ಮತ್ತೆ ಆಸ್ಟ್ರಿಯಾ ಪಯಣ.
ರಾಜಕೀಯ
ಅನುಭವ-ಒಳನೋಟ
ಕಾಂಗ್ರೆಸ್‌ನ ಅಖಿಲಭಾರತ ಅಧಿವೇಶನದ ಅಧ್ಯಕ್ಷತೆ
೧೯೩೮ರ ಫೆಬ್ರವರಿ ೧೯ರಂದು, ಹರಿಪುರದಲ್ಲಿ.
ವಿದೇಶೀ ನೆಲಗಳ ಓಡಾಟದಿಂದ ಪಡೆದ ರಾಜಕೀಯ ಅನುಭವ-ಒಳನೋಟಗಳಿಂದ ಬ್ರಿಟಿಷರ ಒಡೆದು ಆಳುವನೀತಿ
ಕುರಿತ ಕ್ಷಾತ್ರತೇಜದ ಐತಿಹಾಸಿಕ ಭಾಷಣ, ದೇಶ ವಿಭಜನೆಯ
ಬ್ರಿಟಿಷರ ತಂತ್ರದ ಸೂಚನೆ. ಮುಂದಿನ ೯ ವರ್ಷದಲ್ಲೇ ಸತ್ಯವಾದ ಬೋಸ್ ಭವಿಷ್ಯವಾಣಿ! ಆರೆಸ್ಸೆಸ್‌ನ ’ಸಂಘ ಶಿಕ್ಷಾವರ್ಗ’ ಶಿಬಿರಕ್ಕೆ ೧೯೩೮ರಲ್ಲಿ ಭೇಟಿಗೆ ಒಪ್ಪಿಗೆ, ಸಂಘದ ಧ್ಯೇಯ – ಅನುಶಾಸನ ಕಾರ‍್ಯಪದ್ಧತಿ ಕುರಿತ ಶ್ಲಾಘನೆ. ಆದರೆ ಕಾರಣಾಂತರಗಳಿಂದ ಭೇಟಿ
ಸಾಧ್ಯವಾಗಲಿಲ್ಲ.ಕಾಂಗ್ರೆಸ್ ಅಧ್ಯಕ್ಷಗಾದಿಗೆ ನಡೆದ ಮೊತ್ತಮೊದಲ ಚುನಾವಣೆಯಲ್ಲಿ ಡಾ|| ಪಟ್ಟಾಭಿ ಸೀತಾರಾಮಯ್ಯರ ವಿರುದ್ಧ ೨೧೫ ಮತಗಳ ಗೆಲುವು!
ಸುಭಾಷ್ ವಿರುದ್ಧ ಹಲವಾರು ಟೀಕೆಗಳು, ಅನಗತ್ಯ ಋಣಾತ್ಮಕ
ಮಾತುಗಳು ಗಾಂಧೀಜಿಯಿಂದ. ಸ್ವಾತಂತ್ರ್ಯದ ಮೋಡಗಳು ಸಮೀಪ ಇರುವಂತೆಯೇ ಬ್ರಿಟಿಷ್ ಸರ್ಕಾರದ ಜತೆ
ದುರ್ಬಲ ಕಾಂಗ್ರೆಸ್‌ನ ತಾರ್ಕಿಕ ನಡೆಗಳಿಂದ ಬೇಸತ್ತು ಕಾಂಗ್ರೆಸ್‌ಗೆ ರಾಜೀನಾಮೆ. ’ಫಾರ್‌ವರ್ಡ್ ಬ್ಲಾಕ್’ ಸ್ಥಾಪನೆ.೧೯೪೦, ಜೂನ್ ೧೮ರಂದು ಡಾ|| ಹೆಡಗೇವಾರ್ ಜತೆ ಭೇಟಿ ಆದರೆ ತೀವ್ರ ಜ್ವರದಿಂದ ಹಾಸಿಗೆ
ಹಿಡಿದಿದ್ದ ಡಾ|| ಹೆಡಗೇವಾರ್ ಜತೆ
ಸಾಧ್ಯವಾಗದ ಮಾತುಕತೆ. ಮೂರೇದಿನದಲ್ಲಿ ಡಾ|| ಹೆಡಗೇವಾರ್ ನಿಧನ. ಕೈ ತಪ್ಪಿದ ಮಹಾಮಿಲನ. ನಂತರ ವೀರ ಸಾವರ್ಕರ್ ಭೇಟಿ.ಬೋಸ್
ಕಾಣೆಯಾಗಿದ್ದಾರೆ’ ಎಂಬ ಸುದ್ದಿ ೧೯೪೧
ಜನವರಿ ೨೬ಕ್ಕೆ! ಕಾಬೂಲ್ ಮೂಲಕ ಬರ್ಲಿನ್ ಸೇರಿದ ಬೋಸ್‌ರಿಂದ ಸೈನಿಕ
ಕಾರ‍್ಯಾಚರಣೆ. ’ಫ್ರೀ ಇಂಡಿಯಾ
ಸೆಂಟರ್’ ೧೯೪೧, ನವೆಂಬರ್ ೨ಕ್ಕೆ ಉದ್ಘಾಟನೆ, ’ಆಜಾದ್ ಹಿಂದ್’ ಲಾಂಛನ, ’ಜೈಹಿಂದ್’ ಘೋಷಣೆ, ಬೋಸರಿಗೆ ’ನೇತಾಜಿ’ ಬಿರುದು. ಜರ್ಮನ್ ಸೇನಾಕೇಂದ್ರಗಳಿಗೆ ಸೈನಿಕ ತರಬೇತಿ,
ಬರ್ಲಿನ್ ರೇಡಿಯೋದಲ್ಲಿ ಆಗಾಗ
ಭಾಷಣ, ಹಿಟ್ಲರ್ ಜತೆ ಭೇಟಿ. ಜಪಾನ್‌ಗೆ
ತೆರಳಿ ಅಲ್ಲಿಂದ ಪೂರ್ವಾಂಚಲ ಭಾರತದ ಗಡಿಗಳಲ್ಲಿ ಸೈನ್ಯ ಸಜ್ಜು ಮಾಡಲು ಇಂಡಿಯನ್ ಇಂಡಿಪೆಂಡೆನ್ಸ್
ಲೀಗ್ ಮೂಲಕ ಅವಿರತ ಚಟುವಟಿಗೆ.
ಆಜಾದ್ ಹಿಂದ್ ಸೇನೆ
ಬಲಿಷ್ಠಗೊಂಡ ಆಜಾದ್ ಹಿಂದ್ ಸೇನೆಗೆ
ದೌಡಾಯಿಸುತ್ತಿದ್ದ ನಿವೃತ್ತಯುದ್ಧ ಕೈದಿಗಳು. ಮುಂದಿನ ದಿನಗಳಲ್ಲಿ ಪಕ್ವ ಸೈನ್ಯವಾಗಿ ರೂಪುಗೊಂಡ
(ಐ.ಎನ್.ಎ).[೧] ಪಾದರಸದಂತೆ ಪೂರ್ವ ಏಷ್ಯಾ ರಾಷ್ಟ್ರಗಳಲ್ಲಿ ಓಡಾಡಿ
ಸ್ವರಾಜ್ಯ ಹೋರಾಟಕ್ಕೆ ಅಗಾಧ ಬೆಂಬಲ ಪಡೆದ ಬೋಸ್‌ರಿಂದ ಆರ್ಜೀ-ಹುಕುಮಂತ್-ಎ-ಆಜಾದ್ ಹಿಂದ್
(ಸ್ವತಂತ್ರ ಭಾರತದ ಹಂಗಾಮಿ ಸರ್ಕಾರ) ಸ್ಥಾಪನೆ; ಐಎನ್‌ಎಯ ಕಮಾಂಡರ್ ಇನ್ ಚೀಫ್ ಆಗಿ ಬೋಸ್. ೧೯೪೫ರ ಆಗಸ್ಟ್ ೧೮ರಂದು ದಕ್ಷಿಣ ವಿಯೆಟ್ನಾಂನ
ಸೈಗಾನ್‌ನಿಂದ ವಿಮಾನಹತ್ತಿದ ಸುಭಾಷ್, ವಿಮಾನ
ಸ್ಫೋಟದಿಂದಾಗಿ ನಿಧನ. ಆ ಕುರಿತು ಸ್ಪಷ್ಟಗೊಳ್ಳದ ಅನೇಕ ವಿವಾದಗಳು ಇಂದಿಗೂ
ಇದೆ. ಅನ್ವೇಷಣಾ ಸಮಿತಿ ನೇಮಿಸಿದರೂ, ಸಾವನ್ನೊಪ್ಪದ
ಅನೇಕಮಂದಿ ಬಹಳವರ್ಷ ನೇತಾಜಿ ಬದುಕಿದ್ದಾರೆಂದೇ, ತಿಳಿದಿದ್ದರು. ಬೋಸರು ಆಗಾಗ ಹೇಳುತ್ತಿದ್ದರು "ನೀವು ನಿಮ್ಮ ರಕ್ತ ಕೊಡಿ ನಾನು ನಿಮಗೆ
ಸ್ವಾತಂತ್ರ್ಯ ತಂದು ಕೊಡುತ್ತೇನೆ. ಸ್ವಾತಂತ್ರ್ಯವೆಂಬುದು ಯಾರೂ ಕೊಡುವಂಥ ಸರಕಲ್ಲ ಅದು ನಾವು
ಪಡೆದುಕೊಳ್ಳಬೇಕಾದದ್ದು" ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಅಧ್ಯಕ್ಷರಾಗಿ
ಸತತ ಎರಡು ಬಾರಿ ಕಾರ್ಯ ನಿರ್ವಹಿಸದ ಇವರು, ಮಹಾತ್ಮ ಗಾಂಧಿಯವರ ಅಹಿಂಸಾತ್ಮಕ ತತ್ವಗಳನ್ನು ಒಪ್ಪದೆ ಪಕ್ಷದಿಂದ ಹೊರಬಂದರು. ಮುಂದೆ
ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ನೇತಾಜಿಯವರು ಭಾರತೀಯ ರಾಷ್ಟ್ರೀಯ ಸೇನೆಯನ್ನು
ಅನುಸ್ಥಾಪಿಸಿದರು. ಇವರು ಟೈವಾನ್‍ನಲ್ಲಿ ೧೯೪೫ರ ಆಗಸ್ಟ್ ೧೮ರಂದು ವಿಮಾನ ಅಪಘಾತದಲ್ಲಿ ಮರಣ
ಹೊಂದಿದರು ಎಂದು ಭಾವಿಸಲಾಗಿದೆ. ಆದರೆ ಈ ಘಟನೆ ವಿವಾದಿತವಾಗಿದೆ.
ವಿಮಾನ ಅಪಘಾತದಲ್ಲೇ ಬೋಸ್ ಸಾವು
2 Sep, 2016 ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರು 1945ರ ಆಗಸ್ಟ್ 18ರಂದು ತೈವಾನ್‌ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲೇ
ಮೃತಪಟ್ಟಿದ್ದಾರೆ ಎಂದು ಜಪಾನ್ ಸರ್ಕಾರ ಬಿಡುಗಡೆ ಮಾಡಿರುವ ವರದಿ ತಿಳಿಸಿವೆ.ನೇತಾಜಿ ಸುಭಾಷ್‌ಚಂದ್ರ
ಬೋಸ್ ಅವರು 1945ರ ಆಗಸ್ಟ್ 18ರಂದು ತೈವಾನ್‌ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲೇ
ಮೃತಪಟ್ಟಿದ್ದಾರೆ ಎಂದು ಜಪಾನ್ ಸರ್ಕಾರ ಬಿಡುಗಡೆ ಮಾಡಿರುವ ವರದಿ ತಿಳಿಸಿವೆ. ಬೋಸ್ ಅವರ ಸಾವಿನ ಕುರಿತ 60 ವರ್ಷದ ಹಳೆಯ ವರ್ಗಿಕೃತ ದಾಖಲೆಗಳನ್ನು ಜಪಾನ್
ಸರ್ಕಾರ ಗುರುವಾರ ಸಾರ್ವಜನಿಕವಾಗಿ ಬಹಿರಂಗಪಡಿಸಿದೆ.ಸುಭಾಷ್ ಸಾವಿನ ಕುರಿತ ದಾಖಲೆಗಳಿಗಾಗಿಯೇ
ರೂಪಿಸಲಾಗಿರುವ ‘ಬೋಸ್‌ಫೈಲ್ಸ್.ಇನ್ಫೊ’
ವೆಬ್ಸೈಟ್ನಲ್ಲಿ ಮೊದಲ
ಬಾರಿ ಈ ದಾಖಲೆಗಳನ್ನು ಉಲ್ಲೇಖಿಸಿ ವರದಿ ಪ್ರಕಟಿಸಲಾಗಿದೆ. ಸುಭಾಷ್ ಚಂದ್ರ ಬೋಸ್ ಅವರ ಸಾವಿಗೆ
ಕಾರಣಗಳು ಮತ್ತು ಇತರ ವಿಷಯಗಳು’ ಶೀರ್ಷಿಕೆ
ಅಡಿಯಲ್ಲಿ ಈ ಬಗ್ಗೆ ವರದಿಯನ್ನು ಪ್ರಕಟಿಸಲಾಗಿದೆ. ಬೋಸ್ ಅವರ ಸಾವಿನ ಕುರಿತು 1956ರಲ್ಲೇ ವರದಿಯನ್ನು ಸಿದ್ಧಪಡಿಸಿ ಟೊಕಿಯೊದಲ್ಲಿನ
ಭಾರತೀಯ ರಾಯಭಾರಿಗೆ ಸಲ್ಲಿಸಲಾಗಿತ್ತು. ಆದರೆ, ವರ್ಗೀಕೃತ ದಾಖಲೆಗಳಾಗಿದ್ದರಿಂದ ಇಲ್ಲಿಯವರೆಗೂ ಭಾರತ ಅಥವಾ ಜಪಾನ್ ಈ ವರದಿಯನ್ನು
ಬಹಿರಂಗಪಡಿಸಿರಲಿಲ್ಲ’ ಎಂದು ವೆಬ್‌ಸೈಟ್
ತಿಳಿಸಿದೆ. ಜಪಾನ್ ಭಾಷೆಯಲ್ಲಿನ 7 ಪುಟಗಳು ಮತ್ತು
ಇಂಗ್ಲಿಷ್‌ಗೆ ಭಾಷಾಂತರಿಸಿದ 10 ಪುಟಗಳ ವರದಿ
ಇದಾಗಿದೆ. 1945ರ ಆಗಸ್ಟ್ 18ರಂದು ಬೋಸ್ ಅವರಿದ್ದ ವಿಮಾನ ಅಪಘಾತಕ್ಕೀಡಾಯಿತು. ಅದೇ
ದಿನ ಸಂಜೆ ತೈಪೆ ಆಸ್ಪತ್ರೆಯಲ್ಲಿ ಅವರು ಮೃತಪಟ್ಟರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಬೋಸ್ ಅವರು ಪ್ರಯಾಣಿಸುತ್ತಿದ್ದ ವಿಮಾನ, ಹಾರಾಟ ಆರಂಭಿಸಿದ ತಕ್ಷಣ ನೆಲಕ್ಕೆ ಅಪ್ಪಳಿಸಿತು. ಆಗ
ಬೋಸ್ ಅವರು ತೀವ್ರ ಗಾಯಗೊಂಡರು. ಮಧ್ಯಾಹ್ನ 3 ಗಂಟೆಗೆ ತೈಪೆಯ ಸೇನಾ ಆಸ್ಪತ್ರೆಗೆ ಬೋಸ್ ಅವರನ್ನು ದಾಖಲಿಸಲಾಯಿತು. ಬಳಿಕ 7 ಗಂಟೆಗೆ ಅವರು ಮೃತಪಟ್ಟರು. ಆಗಸ್ಟ್ 22ರಂದು ಬೋಸ್ ಅವರ ಅಂತ್ಯಕ್ರಿಯೆ ನಡೆಸಲಾಯಿತು’
ಎಂದು ವರದಿ ತಿಳಿಸಿದೆ.
ವಿಮಾನ ಅಪಘಾತಕ್ಕೀಡಾದ ವಿವರಗಳನ್ನು ಸಹ ವರದಿಯಲ್ಲಿ ತಿಳಿಸಲಾಗಿದೆ. ವಿಮಾನ ಹಾರಾಟ ಆರಂಭಿಸಿ 20 ಮೀಟರ್ ಎತ್ತರಕ್ಕೆ ಹೋದ ಬಳಿಕ ಎಡಬದಿಯ ರೆಕ್ಕೆಗೆ
ಧಕ್ಕೆಯಾಯಿತು. ಬಳಿಕ ಎಂಜಿನ್‌ಗೂ ಧಕ್ಕೆಯಾಗಿ ಕೆಲವೇ ಕ್ಷಣಗಳಲ್ಲಿ ವಿಮಾನ ಬೆಂಕಿಗೆ
ಆಹುತಿಯಾಯಿತು. ಈ ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಬೋಸ್ ಅವರು ಸಾಹಸಪಟ್ಟು ವಿಮಾನದಿಂದ ಕೆಳಗೆ
ಇಳಿದರು (ಲಂಡನ್ ನಿಂದ ಬಂದ ವರದಿ). (ಜಪಾನ್ ಸರ್ಕಾರ ಬಿಡುಗಡೆ ಮಾಡಿರುವ ಈ ವರದಿಯು ಭಾರತ
ಸರ್ಕಾರ 1956ರಲ್ಲಿ ರಚಿಸಿದ್ದ
ಶಹ ನವಾಜ್ ಖಾನ್ ನೇತೃತ್ವದ ತನಿಖಾ ವರದಿಯನ್ನು ಅನುಮೋದಿಸುತ್ತದೆ ಎಂದು ವೆಬ್‌ಸೈಟ್
ತಿಳಿಸಿದೆ.)[೨]
ವಿಮಾನ ಅಪಘಾತದಲ್ಲಿ ನೇತಾಜಿ ಸಾವು: ಆಶಿಶ್ ರೇ
5 Dec, 2016 ನೇತಾಜಿ ಸುಭಾಶ್ಚಂದ್ರ ಬೋಸ್ ಅವರು ವಿಮಾನ ಅಪಘಾತದಲ್ಲಿ
ಮೃತಪಟ್ಟಿರುವ ಕುರಿತು ತಮ್ಮ ಬಳಿ ಸಾಕ್ಷ್ಯ ಇದೆ’ ಎಂದು ನೇತಾಜಿ ಅವರ ಸೋದರ ಮೊಮ್ಮಗ ಹಾಗೂ ಸಂಶೋಧಕ ಆಶಿಶ್ ರೇ ದಿ.4-12-2016 ಭಾನುವಾರ ಹೇಳಿದ್ದಾರೆ. ‘1945 ಆಗಸ್ಟ್ 18ರಂದು ತೈವಾನ್‌ನ ತೈಪೆಯಲ್ಲಿ ಸಂಭವಿಸಿದ ವಿಮಾನ
ಅಪಘಾತದಲ್ಲಿ ಬೋಸ್ ಅವರು ಮೃತಪಟ್ಟಿದ್ದಾರೆ’ ಎಂದು ಅವರು ತಿಳಿಸಿದ್ದಾರೆ. ‘ಜಪಾನ್‌ನ ರೆಂಕೋಜಿ
ದೇವಾಲಯದಲ್ಲಿರುವ ನೇತಾಜಿ ಅವರ ಚಿತಾಭಸ್ಮವನ್ನು ಭಾರತಕ್ಕೆ ತರಬೇಕು’ ಎಂದೂ ರೇ ಆಗ್ರಹಿಸಿದ್ದಾರೆ. ‘ನೇತಾಜಿ ಅವರು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ
ಎಂಬುದನ್ನು ಮೂರು ವರದಿಗಳು ದೃಢಪಡಿಸಿವೆ. ಅವರು ಸೋವಿಯತ್ ಒಕ್ಕೂಟ ಪ್ರವೇಶಿಸಿರುವ ಸಾಧ್ಯತೆ
ಇಲ್ಲ ಮತ್ತು ಅಲ್ಲಿ ಅವರು ಕೈದಿಯಾಗಿರಲಿಲ್ಲ’ ಎಂದೂ ಹೇಳಿದ್ದಾರೆ.
‘ಭಾರತವನ್ನು ಬ್ರಿಟಿಷರಿಂದ ಮುಕ್ತಗೊಳಿಸಲು
ಕಮ್ಯುನಿಷ್ಟ್ ರಾಷ್ಟ್ರವಾದ ರಷ್ಯಾ ಸಹಾಯ ಮಾಡಬಹುದು ಎಂದು ನೇತಾಜಿ ವಿಶ್ವಾಸ
ಇರಿಸಿಕೊಂಡಿದ್ದರು. ಅದಕ್ಕಾಗಿ ಅವರು ರಷ್ಯಾಕ್ಕೆ ತೆರಳಲು ಬಯಸಿದ್ದರು’ ಎಂದು ತಿಳಿಸಿದ್ದಾರೆ. ‘ತಮಗೆ ರಕ್ಷಣೆ ನಿಡಲು ಜಪಾನ್‌ಗೆ ಸಾಧ್ಯವಿಲ್ಲ ಎಂದು
ನೇತಾಜಿ ಅರಿತಿದ್ದರು. ಯಾಕೆಂದರೆ ಅದು ಶರಣಾಗಿತ್ತು. ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವ
ತಮ್ಮ ಧ್ಯೇಯಕ್ಕೆ ಸೋವಿಯತ್ ಒಕ್ಕೂಟ ಮಾತ್ರ ಸಹಾಯ ಮಾಡಬಲ್ಲುದು ಎಂದು ಅವರು ಬಲವಾಗಿ ನಂಬಿದ್ದರು’
ಎಂದು ರೇ ವಿವರಿಸಿದ್ದಾರೆ. ‘ನೇತಾಜಿ ಸಾವಿನ ಕುರಿತು ಭಾರತದ ನಿಲುವು
ಭಾವನಾತ್ಮಕವಾಗಿದೆ. ಆದರೆ ಸತ್ಯವನ್ನು ತಿಳಿಯಲು ಇದರಿಂದ ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.[೩]
ಬೋಸರ ಅಂತಿಮದಿನದ ಕಡತಗಳು
ಪ್ರಧಾನಿ ನರೇಂದ್ರ ಮೋದಿ ಅವರು 2016ರ ಜನವರಿಯಲ್ಲಿ ಸುಭಾಷ್ ಚಂದ್ರ ಬೋಸ್ ಅವರ
ಜನ್ಮದಿನದಂದು ಈ ಸ್ವಾತಂತ್ರ್ಯ ಹೋರಾಟಗಾರನಿಗೆ ಸಂಬಂಧಿಸಿದ, ಕೇಂದ್ರ ಸರ್ಕಾರದ ವಶದಲ್ಲಿದ್ದ ವರ್ಗೀಕೃತ ಕಡತಗಳನ್ನು
ಬಹಿರಂಗಪಡಿಸುವ ಕೆಲಸಕ್ಕೆ ಚಾಲನೆ ನೀಡಿದರು. ಮೋದಿ ಅವರ ಪ್ರವೃತ್ತಿಗೆ ಅನುಗುಣವಾಗಿ ಈ
ಕಾರ್ಯಕ್ರಮ ಭಾರಿ ಅಬ್ಬರದ ಪ್ರದರ್ಶನವಾಗಿಯೇ ನಡೆಯಿತು. ಭಾವುಕ ಸಂಶೋಧಕರ ಗುಂಪೊಂದು ಎನ್‌ಡಿಎ ಸರ್ಕಾರದ
ಮನವೊಲಿಸಿತು. ಈ ಅಂಶಗಳೆಂದರೆ, 1. ಈಗ ಹೇಳಿರುವಂತೆ,
1945ರ ಆಗಸ್ಟ್‌ನಲ್ಲಿ ತೈವಾನ್‌ನಲ್ಲಿ
ನಡೆದ ವಿಮಾನ ಅಪಘಾತದಲ್ಲಿ ಬೋಸ್ ಸತ್ತಿಲ್ಲ ಮತ್ತು 2. ಬೋಸ್ ಅವರ ಜೀವನ ಮತ್ತು ಸಾವಿನ ಬಗೆಗಿನ ನೆನಪುಗಳನ್ನು
ಮುಚ್ಚಿಡುವ ಮೂಲಕ ಜವಾಹರಲಾಲ್ ನೆಹರೂ ನೇತೃತ್ವದ ಕಾಂಗ್ರೆಸ್ ಸರ್ಕಾರ ಅವರಿಗೆ ಅವಮಾನ ಮಾಡಿದೆ. ಕಡತ ಬಹಿರಂಗಪಡಿಸುವ ಪ್ರಕ್ರಿಯೆ ಆರಂಭ ಆಗಿ ಒಂದು
ವರ್ಷ ಆಗಿದೆ. ಈಗಾಗಲೇ 1200 ಕಡತಗಳನ್ನು
ಬಹಿರಂಗ ಮಾಡಲಾಗಿದ್ದು ಯಾವ ಕಡತವೂ ಪಿತೂರಿ ಸಿದ್ಧಾಂತವನ್ನು ದೃಢಪಡಿಸಿಲ್ಲ. ಅಷ್ಟೇ ಅಲ್ಲ,
; ವಾಸ್ತವದಲ್ಲಿ, ಬೋಸ್ ಅವರ ಮಗಳು ಆಸ್ಟ್ರಿಯಾದಲ್ಲಿ ನೆಲೆಸಿದ್ದ ಅನಿತಾ
ಅವರಿಗೆ ಸರ್ಕಾರದ ಬೊಕ್ಕಸದಿಂದ ಭತ್ಯೆ ಮಂಜೂರು ಮಾಡುವ ಮೂಲಕ ನೆಹರೂ ಅತ್ಯಂತ ಗೌರವಪೂರ್ವಕವಾಗಿ
ನಡೆದುಕೊಂಡಿದ್ದಾರೆ.
ಬೋಸ್ ಮತ್ತು ಗಾಂಧಿ
ಬೋಸ್ ಮತ್ತು ಗಾಂಧಿ ನಡುವೆ ಒಂದು ಪ್ರಸಿದ್ಧ ಮತ್ತು
ಮಹತ್ವದ ಭಿನ್ನಾಭಿಪ್ರಾಯ ಇತ್ತು ಎಂಬುದು ನಿಜ. 1939ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಬೋಸ್ ಅವರ
ಪುನರಾಯ್ಕೆಯನ್ನು ಗಾಂಧಿ ವಿರೋಧಿಸಿದ ಸಂದರ್ಭದಲ್ಲಿ ಇದು ಉಂಟಾಯಿತು. ಆದರೆ ಬೋಸ್ ಅದಕ್ಕಿಂತ
ಹಿಂದಿನ ಕನಿಷ್ಠ ಒಂದೂವರೆ ದಶಕಗಳ ಕಾಲ ಗಾಂಧಿಯ ಬಹುದೊಡ್ಡ ಅಭಿಮಾನಿಯಾಗಿದ್ದರು.
ಗಾಂಧಿ ಸ್ವಾತಂತ್ರ್ಯ ಹೋರಾಟದ ಸರ್ವೋಚ್ಚ ನಾಯಕ ಎಂದು
ಬೋಸ್ ಭಾವಿಸಿದ್ದರು. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಕ್ಕೆ ಮೊದಲಿನ ಪತ್ರ
ವ್ಯವಹಾರದಲ್ಲಿಯೂ ಬೋಸ್ ಇದನ್ನು ಸ್ಪಷ್ಟಪಡಿಸಿದ್ದಾರೆ- ‘ನಿಮ್ಮ ಬಗ್ಗೆ ನನಗಿರುವ ಗೌರವವನ್ನು ಕಡಿಮೆ ಮಾಡಲು
ಯಾರಿಂದಲೂ ಸಾಧ್ಯವಿಲ್ಲ’ ಎಂದು
ಪತ್ರವೊಂದರಲ್ಲಿ ಗಾಂಧಿಗೆ ಬೋಸ್ ಹೇಳಿದ್ದರು. ‘ಇತರರ ವಿಶ್ವಾಸ ಗೆಲ್ಲಲು ಸಾಧ್ಯವಾದರೂ ಭಾರತದ ಅತ್ಯಂತ ಶ್ರೇಷ್ಠ ವ್ಯಕ್ತಿಯ ವಿಶ್ವಾಸ
ಸಿಗದಿರುವುದು ನನ್ನ ಮಟ್ಟಿಗೆ ದೊಡ್ಡ ದುರಂತ’ ಎಂದೂ ಬೋಸ್ ಬರೆದಿದ್ದರು. ಅಹಿಂಸೆಯಲ್ಲಿ ಸಂಪೂರ್ಣ ನಂಬಿಕೆ ಇಲ್ಲದ್ದರಿಂದಲೇ
ಬೋಸ್ ಅವರು ಇಂಡಿಯನ್ ನ್ಯಾಷನಲ್ ಆರ್ಮಿಯನ್ನು (ಐಎನ್‍ಎ) ಸ್ಥಾಪಿಸಿದರು. ಹಾಗಿದ್ದರೂ, ಐಎನ್‍ಎಯ ನಾಲ್ಕು ದಳಗಳಲ್ಲಿ ಮೂರಕ್ಕೆ ಗಾಂಧಿ,
ಜವಾಹರಲಾಲ್ ನೆಹರೂ ಮತ್ತು
ಮೌಲಾನಾ ಆಜಾದ್ ಅವರ ಹೆಸರು ಇರಿಸಿದ್ದರು ಎಂಬುದು ಗಮನಾರ್ಹ! ಅವರಿಗೆ ಅತಿ ಹೆಚ್ಚು ಗೌರವ ಇದ್ದದ್ದು ಮಹಾತ್ಮ
ಗಾಂಧಿಯ ಬಗ್ಗೆಯೇ ಆಗಿತ್ತು. 1943ರ ಅಕ್ಟೋಬರ್ 2ರಂದು ಬ್ಯಾಂಕಾಕ್‌ನಿಂದ ರೇಡಿಯೊದಲ್ಲಿ ಮಾತನಾಡಿದ್ದ
ಬೋಸ್, ‘ಅತ್ಯಂತ ಶ್ರೇಷ್ಠ
ನಾಯಕ ಮಹಾತ್ಮ ಗಾಂಧಿಯ 75ನೇ ಹುಟ್ಟುಹಬ್ಬ
ಇಂದು’ ಎಂಬುದನ್ನು ಭಾರತೀಯ
ಕೇಳುಗರಿಗೆ ನೆನಪಿಸಿದ್ದರು. ಗಾಂಧಿಯ ಕೊಡುಗೆಗಳನ್ನು ವಿವರಿಸಿದ್ದರು.
1920ರಲ್ಲಿ ಅಸಹಕಾರ ಚಳವಳಿಯನ್ನು ಅವರು ಹೇಗೆ
ಆರಂಭಿಸಿದ್ದರು ಎಂಬುದನ್ನು ಹೇಳಿದರು. ‘ಸ್ವಾತಂತ್ರ್ಯದ
ಮಾರ್ಗವನ್ನು ತೋರುವುದಕ್ಕಾಗಿ ದೇವರೇ ಈ ವ್ಯಕ್ತಿಯನ್ನು ಕಳುಹಿಸಿದಂತೆ ತೋರುತ್ತದೆ. ತಕ್ಷಣ
ಮತ್ತು ಸ್ವಯಂಪ್ರೇರಣೆಯಿಂದ ಇಡೀ ದೇಶ ಅವರ ಹಿಂದೆ ನಿಂತಿತು’ ಎಂದು ಬೋಸ್ ಹೇಳಿದರು. ಗಾಂಧಿ ರಾಷ್ಟ್ರ ನಾಯಕರಾಗಿ
ಬೆಳೆದ ನಂತರದ 20 ವರ್ಷಗಳ
ಅವಧಿಯಲ್ಲಿ ಭಾರತೀಯರು ‘ರಾಷ್ಟ್ರೀಯ
ಆತ್ಮಗೌರವ ಮತ್ತು ಆತ್ಮವಿಶ್ವಾಸವನ್ನು’ ಕಲಿತರು. ಈಗ
ಅವರಿಗೆ ‘ಇಡೀ ದೇಶವನ್ನು
ಪ್ರತಿನಿಧಿಸುವ ರಾಷ್ಟ್ರವ್ಯಾಪಿ ಸಂಘಟನೆಯೂ ಇದೆ. ಭಾರತಕ್ಕೆ ಮತ್ತು ಭಾರತದ ಸ್ವಾತಂತ್ರ್ಯಕ್ಕೆ
ಗಾಂಧಿ ನೀಡಿದ ಕೊಡುಗೆ ವಿಶಿಷ್ಟ ಮತ್ತು ಪರ್ಯಾಯವಿಲ್ಲದ್ದಾಗಿದೆ. ನಮ್ಮ ರಾಷ್ಟ್ರೀಯ
ಇತಿಹಾಸದಲ್ಲಿ ಎಲ್ಲ ಕಾಲದಲ್ಲಿಯೂ ಅವರ ಹೆಸರನ್ನು ಸ್ವರ್ಣಾಕ್ಷರದಲ್ಲಿಯೇ ಬರೆದಿಡಲಾಗುತ್ತದೆ’
ಎಂಬುದು ಬೋಸ್ ಅವರ
ಮಾತಾಗಿತ್ತು. ಬೋಸ್ ಅವರ ಈ ಭಾಷಣದ ಸಂದರ್ಭದಲ್ಲಿ ಗಾಂಧೀಜಿ ಪುಣೆಯ ಜೈಲಿನಲ್ಲಿದ್ದರು.
ಗಾಂಧೀಜಿ ಬೋಸ್ ಬಗ್ಗೆ
1946ರ ಜನವರಿಯಲ್ಲಿ ಯುನೈಟೆಡ್ ಪ್ರೆಸ್ ಆಫ್ ಇಂಡಿಯಾ
ಸುದ್ದಿ ಸಂಸ್ಥೆ ಜತೆ ಮಾತನಾಡುತ್ತಾ, ಐಎನ್‍ಎಯ ‘ಜೈ ಹಿಂದ್’ ಘೋಷಣೆಯನ್ನು ಕಾಂಗ್ರೆಸ್‌ಗೆ ಅಳವಡಿಸಿಕೊಳ್ಳಲಾಗುವುದು
ಎಂದು ಹೇಳಿದರು. ಯುದ್ಧದಲ್ಲಿ ಬಳಕೆಯಾಗಿದೆ ಎಂಬ ಕಾರಣಕ್ಕೆ ಈ ಘೋಷಣೆ ಹಿಂಸೆಯ ರೂಪ ಎಂದು
ಪರಿಗಣಿಸಬೇಕಾಗಿಲ್ಲ ಎಂದು ಗಾಂಧಿ ಹೇಳಿದರು.
ಬೋಸ್ ಅವರ ಬಗ್ಗೆ ಗಾಂಧಿಯ ಅಭಿಪ್ರಾಯ ಹೀಗಿತ್ತು: ‘ತಮ್ಮ ತ್ಯಾಗದ ಸಾಮರ್ಥ್ಯ ಅವರಿಗೆ ಸದಾ ತಿಳಿದಿತ್ತು.
ಅವರ ವ್ಯವಹಾರ ಚಾತುರ್ಯ, ಸೇನೆಯನ್ನು
ಮುನ್ನಡೆಸುವ ತಾಕತ್ತು ಮತ್ತು ಸಂಘಟನಾ ಸಾಮರ್ಥ್ಯ ಅವರು ದೇಶ ತೊರೆದು ಹೋದ ಮೇಲಷ್ಟೇ ನನಗೆ
ತಿಳಿಯಿತು. ಮಾರ್ಗದ ಬಗ್ಗೆ ನನ್ನ ಮತ್ತು ಅವರ ನಡುವಣ ದೃಷ್ಟಿಕೋನದ ವ್ಯತ್ಯಾಸ ಬಹಳ ಪ್ರಸಿದ್ಧವೇ
ಆಗಿದೆ’.
ಐಎನ್‍ಎಯಲ್ಲಿ ಮೇಜರ್ ಜನರಲ್ ಆಗಿದ್ದ ಷಾ ನವಾಜ್
ಖಾನ್ ಅವರನ್ನು ಬಿಹಾರಕ್ಕೆ (ಬಿಹಾರದಲ್ಲಿ ಮುಸ್ಲಿಮರು ಎದುರಿಸಿದ ಹಿಂಸೆ ಅಷ್ಟೇ ಘೋರವಾಗಿತ್ತು)
ಕಳುಹಿಸಿದರು. ಖಾನ್ ಮತ್ತು ಐಎನ್‍ಎಯ ಇತರ ಆರು ಯೋಧರು ಮನೆಗಳು ಮತ್ತು ಗ್ರಾಮಗಳನ್ನು ಪುನರ್
ನಿರ್ಮಿಸಲು ನಿರಾಶ್ರಿತ ಮುಸ್ಲಿಮರಿಗೆ ನೆರವಾದರು.ಷಾ ನವಾಜ್ ಸಾಹೇಬ್ ಅವರು ಅತ್ಯುತ್ತಮ ಕೆಲಸ
ಮಾಡುತ್ತಿದ್ದಾರೆ’ ಎಂದು ಬಿಹಾರದ
ಪ್ರಾರ್ಥನಾ ಸಭೆಯೊಂದರಲ್ಲಿ ಗಾಂಧಿ ಹೇಳಿದ್ದರು. ಷಾ ನವಾಜ್ ಮತ್ತು ಐಎನ್‍ಎಯ ಮಾಜಿ ಯೋಧರ ತಂಡ
ಗಲಭೆ ಸಂತ್ರಸ್ತರಿಗೆ ಹೇಗೆ ಆಹಾರ ವಿತರಿಸಿತು ಎಂಬುದನ್ನೆಲ್ಲ ಗಾಂಧಿ ವಿವರಿಸಿದರು
Subscribe to:
Posts (Atom)